ಕಾಮತೃಷೆಗೆ ಮಗಳನ್ನೆ ಬಳಸಿಕೊಂಡ ಬಿಜೆಪಿ ನಾಯಕ

ಅಮೃತಸರ, ಮಾ. 26 : ಆಸ್ಟ್ರೀಯಾ ಪ್ರಿಟ್ಜಲ್ ಹಾಗೂ ಮುಂಬೈನ ದುಷ್ಟ ಅಪ್ಪ ಇಬ್ಬರೂ ತಮ್ಮ ಮಗಳಂದಿರ ಮೇಲೆಯೇ ಅತ್ಯಾಚಾರವೆಸಗಿದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಮೃತಸರದಲ್ಲೂ ಇದೇ ರೀತಿಯ ಹೇಯ ಪ್ರಕರಣವೊಂದು ಪತ್ತೆಯಾಗಿದೆ.

ಅಚ್ಚರಿಯೆಂದರೆ, ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿರುವ ಆತ ಭಾರತೀಯ ಜನತಾ ಪಕ್ಷದ ನಾಯಕ. ಪಂಜಾಬ್ ನ ಅಜ್ನಾಲಾ ಪಟ್ಟಣದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಅಶೋಕ್ ತನೇಜಾ ತನ್ನ 20 ವರ್ಷದ ಮಗಳ ಸತತ ಏಳು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಮಗಳೇ ನೀಡಿದ ದೂರಿನ ಮೇಲೆ ಬುಧವಾರ ಈ ವಿಕೃತ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

Politician father rapes daughter for eight years

ಅಶೋಕ್ ತನೇಜಾ ತನ್ನ ಕಾಮ ತೃಷೆಗಾಗಿ ಮಗಳನ್ನು ಬಳಸಿಕೊಳ್ಳುವುದಲ್ಲದೇ, ಯಾರಿಗಾದರೂ ಈ ವಿಷಯ ಬಾಯಿಬಿಟ್ಟರೆ ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆದರೆ, ತನೇಜಾ ಎದೆ ನೋವು ಎಂಬ ನೆಪವೊಡ್ಡಿ ಆಸ್ಪತ್ರೆ ದಾಖಲಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+