ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಕಿಯೋದಲ್ಲಿ ವಿಮಾನ ಅಪಘಾತ 17 ಸಾವು

By Staff
|
Google Oneindia Kannada News

ಟೋಕಿಯೋ, ಮಾ. 23 : ಇಲ್ಲಿನ ಹೋಲಿ ಸಿಮೆಂಟರಿ ಬಳಿ ಚಿಕ್ಕ ವಿಮಾನವೊಂದು ಆಕಸ್ಮಿಕವಾಗಿ ಸುಮಾರು 150 ಮೀಟರ್ ಮೇಲಿನಿಂದ ಕೆಳಕ್ಕುಳಿರುಳಿದ ಪರಿಣಾಮ ಅದರಲ್ಲಿದ್ದ 17 ಮಂದಿ ಮೃತಪಟ್ಟಿರುವ ದಾರುಣ ಘಟನೆ ಟೋಕಿಯೋದ ನರಿಟಾ ವಿಮಾನ ನಿಲ್ದಾಣದ ಬಳಿ ಭಾನುವಾರ ಜರುಗಿದೆ. ಅಪಘಾತ ಸಂಭವಿಸಿದ್ದರಿಂದ ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ಪರಿಹಾರ ಕಾರ್ಯ ಮುಂದುವರೆದಿದೆ.

ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಅದರಲ್ಲಿದ್ದ ಪೈಲೆಟ್, ಸಹಪೈಲೆಟ್ ಕೂಡಾ ಮೃತಪಟ್ಟಿದ್ದಾರೆ. ಎಂ ಡಿ 11 ಎಂಬುದು ವಿಮಾನದ ಹೆಸರಾಗಿದೆ. ಅಪಘಾತಕ್ಕೆ ವಿಮಾನ ಸಂಪೂರ್ಣ ಸುಟ್ಟು ಹೋಗಿದ್ದು, ಮೃತಪಟ್ಟವರ ಗುರುತು ಸಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಫೆಡರಲ್ ಏವಿಯೇಷನ್ ಮಂಡಳಿಯ ವಕ್ತಾರ ಮೈಕ್ ಪರ್ಗಸ್ ತಿಳಿಸಿದ್ದಾರೆ. ಇದೀಗ ತನಿಖೆ ಆರಂಭಿಸಿದ್ದು, ಮುಂದಿನ 24 ಗಂಟೆಯೊಳಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X