ವಾಚ್ ನಲ್ಲಿ ರಾಹುಕಾಲ ನೋಡುವ ಅವಕಾಶ
ಬೆಂಗಳೂರು,
ಮಾ. 20 : ಮುಂದುವರೆದ ಟೆಕ್ನಾಲಜಿ ಕರಾಮತ್ತಿನಿಂದ ಇಂದು ಏನನ್ನು ಬೇಕಾದರೂ ಮಾಡಬಹುದು. ಸ್ವಿಜರ್ ಲ್ಯಾಂಡ್ ಮೂಲದ ಬೋರ್ಗಾಯ್ ವಾಚ್ ಕಂಪನಿ ಹೊರತಂದಿರುವ ವಿನೂತನ ತಂತ್ರಜ್ಞಾನ ವಾಚ್ ನಲ್ಲಿ ರಾಹುಕಾಲ ನೋಡುವ ಅವಕಾಶವನ್ನು ಕಲ್ಪಿಸಿದೆ. ಕಾಸಿದ್ದವರು ರಾಹುಕಾಲ, ಶನಿ ಕಾಲ ಅಂತ ಹೀಗೆ ಪ್ರತಿಯೊಂದಕ್ಕೂ ಅರ್ಚಕರಿಗೆ ದೇವರ ಮನೆಗೆ ಎಡತಾಕುವ ಕೆಲಸ ನಿಲ್ಲಬಹುದೇನೂ, ಈ ಮೂಲಕ ಬಡಪಾಯಿ ಅರ್ಚಕರ ಹಾಗೂ ಭವಿಷ್ಯಗಾರರಿಗೆ ಹೊಟ್ಟೆ ಮೇಲೆ ಹೊಡೆಯುವ ಕೆಲಸವಂತೂ ನಡೆಯುವುದು ಸುಳ್ಳಲ್ಲ. id="toptextpromo">ಸ್ವಿಜರ್
ಲ್ಯಾಂಡ್ ವಾಚ್ ಕಂಪನಿ ತಂದಿರುವ ಈ ವಿನೂತನ ವಾಚ್ ನಲ್ಲಿ ದಿನದಲ್ಲಿ ಬರುವ ರಾಹುಕಾಲವನ್ನು ತಕ್ಷಣ ತೋರಿಸುತ್ತದೆ. ಹಿಂದೂ ಧರ್ಮದ ನಂಬಿಕೆ ಪ್ರಕಾರ ರಾಹುಕಾಲ, ಗುಳಿಗಾಲಗಳನ್ನು ನೋಡಿಕೊಂಡು ಶುಭಕಾರ್ಯ ಮಾಡುವುದು ಸರ್ವೆ ಸಾಮಾನ್ಯ. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡಾ ಅನೇಕ ಮಂದಿ ಗಳಿಗೆ ನೋಡಿಕೊಂಡೆ ಕೆಲಸ ಆರಂಭಿಸುತ್ತಾರೆ. ಇದನ್ನು ಗಮನಿಸಿದ ವಾಚ್ ಕಂಪನಿ ವಿನೂತನವಾಗಿ ಬಿಡುಗಡೆ ಮಾಡಿರುವ ವಾಚ್ ನಲ್ಲಿ ರಾಹುಕಾಲ ತೋರಿಸುವ ಅವಕಾಶವನ್ನು ಕಲ್ಪಿಸಿದೆ. ಈ ವಾಚ್ ನ ಬೆಲೆ 1 ಲಕ್ಷ ರುಪಾಯಿಗಳಿಂದ 2 ಲಕ್ಷ ರುಪಾಯಿಯವರೆಗೂ ಇದೆ. ಉಳ್ಳವರು ಈ ವಾಚ್ ನ ಪ್ರಯೋಜನ ಪಡೆಯಬಹುದು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications