ಹೆಣ್ಣುಮಕ್ಕಳು'ಲಕ್ಷಾಧಿಪತಿ'ಆಗ್ಬೇಕು : ಆಡ್ವಾಣಿ

ದೇಶದ ಪ್ರತೀ ಹೆಣ್ಣುಮಗಳನ್ನು ಲಕ್ಷಾಧಿಪತಿ ಮಾಡುವುದು ನನ್ನ ಆಶೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ "ಲಾಡ್ಲಿ ಲಕ್ಷ್ಮಿ ಯೋಜನೆ" ಜಾರಿಗೆ ತಂದು ಈ ಸೌಲಭ್ಯ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತೇವೆ, ಇದು ಎಲ್ಲಾ ಹೆಣ್ಣು ಮಕ್ಕಳಿಗೂ ನಾನು ಕೊಡುತ್ತಿರುವ ಮಾತು ಎಂದು 81 ವರ್ಷದ ಆಡ್ವಾಣಿ ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದಿಕೊಂಡಿದ್ದಾರೆ.
ಈ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಪ್ರತಿ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ರುಪಾಯಿ 6,000 ನಂತೆ ಐದು ವರ್ಷ ಉಳಿತಾಯ ಪತ್ರ ನೀಡಲಿದೆ. ಹುಡುಗಿ ಐದನೇ ತರಗತಿ ಓದುತ್ತಿರಬೇಕಾದರೆ ವರ್ಷಕ್ಕೆ ರುಪಾಯಿ 2,000, ಎಂಟನೇ ತರಗತಿ ಸಮಯಕ್ಕೆ ರುಪಾಯಿ 4,000, ಹತ್ತನೇ ತರಗತಿಗೆ ರುಪಾಯಿ 7,500 ಹಾಗು ಪಿಯುಸಿ ಮುಗಿಸುವ ವೇಳೆಗೆ 1,18,000 ಈ ಯೋಜನೆಯಡಿ ನೀಡಲಾಗುವುದು ಎಂದು ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ. 2006ರಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications