ಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದಿನದು ಮೂರನೇ ಪಟ್ಟಿ.
* ಕೋಲಾರ - ಡಿ ಎಸ್ ವೀರಯ್ಯ
* ಹಾಸನ - ಕೆ ಎಚ್ ಹನುಮೇಗೌಡ
* ಬೆಂಗಳೂರು ಕೇಂದ್ರ - ಪಿ ಸಿ ಮೋಹನ್
* ಚಿತ್ರದುರ್ಗ - ಜನಾರ್ದನ ಸ್ವಾಮಿ