For Daily Alerts
ತೃತೀಯ ರಂಗ ಸೇರುವುದಿಲ್ಲ, ಬಿಜೆಡಿ
ನವದೆಹಲಿ, ಮಾ. 11 : ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ತೃತೀಯ ರಂಗ ಸೇರ್ಪಡೆಯಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹೇಳಿಕೆಯನ್ನು ಬಿಜೆಡಿ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಡಿ ವಕ್ತಾರ ದಾಮೋದರ ರಾಹುತ್, ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯನ್ನು ವೀಕ್ಷಿಸಿರುವೆ ಆದರೆ, ಇಂತಹ ಯಾವ ಮಾತುಕತೆಗಳು ಇನ್ನೂ ನಡೆದಿಲ್ಲ ಎಂದು ಹೇಳುವ ಮೂಲಕ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ತೃತೀಯ ರಂಗದ ನಾಯಕರ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ.
ನಾವು ಸದ್ಯ ಯಾವ ಮೈತ್ರಿಕೂಟದೊಂದಿಗೂ ಗುರುತಿಸಿಕೊಳ್ಳಲು ಇಷ್ಟವಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದರಿಂದ ನಮಗೆ ನಮ್ಮದೇ ಆಗಿರುವ ಕೆಲವು ಬದ್ಧತೆಗಳಿವೆ ಎಂದಷ್ಟೆ ಅವರು ಉತ್ತರಿಸಿದರು. ಕೇಂದ್ರದಲ್ಲಿ ಮತ್ತೆ ಎನ್ ಡಿಎಯೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಗಳನ್ನು ಎದುರಿಸುತ್ತೀರಾ ಎಂಬ ಪ್ರಶ್ನೆಗೂ ರಾಹುತ್ ಸ್ಪಷ್ಟ ಉತ್ತರ ನೀಡದೆ ನಯವಾಗಿ ನುಣುಚಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
ಒರಿಸ್ಸಾ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಗೆಲವು