ಆರ್ ಸಿ ದೇಖಾ ಏಮ್ಸ್ ನೂತನ ನಿರ್ದೇಶಕ
ನವದೆಹಲಿ, ಮಾ. 10 : ಕಳೆದ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಸ್ಥಾನಕ್ಕೆ ಅದೇ ಆಸ್ಪತ್ರೆಯ ಕಿವಿ, ಮೂಗು, ಗಂಟಲು ವಿಭಾಗದ ಮುಖ್ಯಸ್ಥ ಆರ್ ಸಿ ದೇಖಾ ಅವರನ್ನು ನೇಮಕ ಮಾಡಲಾಗಿದೆ. ದೇಖಾ ಅವರ ಐದು ವರ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಏಮ್ಸ್ ಗೆ ನಿರ್ದೇಶಕರನ್ನು ನೇಮಕ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಏಮ್ಸ್ ಇಎನ್ ಟಿ ವಿಭಾಗದ ಮುಖ್ಯಸ್ಥರಾಗಿದ್ದ ಆರ್ ಸಿ ದೇಖಾ ಅವರನ್ನೇ ನಿರ್ದೇಶಕರಾಗಿ ನೇಮಕ ಮಾಡಬೇಕೆಂದು ಸಮಿತಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಈ ಆದೇಶ ಹೊರಬಿದ್ದಿದೆ. ಕಳೆದ ಜುಲೈ ತಿಂಗಳಲ್ಲಿ ಹೃದಯರೋಗ ತಜ್ಞ ಪಿ ವೇಣುಗೋಪಾಲ್ ಏಮ್ಸ್ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾದ ನಂತರ ಇಲ್ಲಿಯವರೆಗೂ ಈ ಸ್ಥಾನ ಖಾಲಿಯಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications