ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆ
ಬೆಂಗಳೂರು, ಮಾ. 6 : ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿದ್ದ ಸಹಕಾರ ಸಂಘಗಳ ಚುನಾವಣೆಯನ್ನು ಲೋಕಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಾರ್ಚ್ 22 ರೊಳಗೆ ನಡೆಯಬೇಕಿದ್ದ ಪ್ರಾಥಮಿಕ ಮತ್ತು ಮಾಧ್ಯಮಿಕ ಸಹಕಾರ ಸಂಘಗಳ ಚುನಾವಣೆಯನ್ನು ಮೇ 23 ರಿಂದ ಜೂನ್ 14 ರೊಳಗೆ, ಏಪ್ರಿಲ್ 10 ರಂದು ನಿಗದಿಯಾಗಿದ್ದ ಒಕ್ಕೂಟ ಸಹಕಾರಿ ಸಂಘಗಳ ಚುನಾವಣೆಯನ್ನು ಜುಲೈ 3 ರಂದು ಹಾಗೂ ಏಪ್ರಿಲ್ 30 ರೊಳಗೆ ನಿಗದಿಯಾಗಿದ್ದ ಅಪೆಕ್ಸ್ ಸಹಕಾರಿ ಸಂಘಗಳ ಚುನಾವಣೆಯನ್ನು ಜುಲೈ 22 ರೊಳಗೆ ನಡೆಸುವಂತೆ ಸರ್ಕಾರ ಸೂಚಿಸಿದೆ.
ಅಂತೆಯೇ, ಜೂನ್ 24 ರಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಸಹಕಾರ ಸಂಘಗಳಿಗೆ, ಜುಲೈ 13 ರೊಳಗೆ ಒಕ್ಕೂಟ ಸಹಕಾರಿ ಸಂಘಗಳಿಗೆ ಹಾಗೂ ಅಪೆಕ್ಸ್ ಸಹಕಾರಿ ಸಂಘಗಳಿಗೆ ಪ್ರಕರಣ 29 ಎಫ್ ಅನ್ವಯ ಪದಾಧಿಕಾರಿಗಳ ಚುನಾವಣೆ ಮತ್ತು ಮೇಲ್ಮಟ್ಟದ ಸಹಕಾರ ಸಂಘಗಳಿಗೆ ಪ್ರತಿನಿಧಿಗಳ ಆಯ್ಕೆ ನಡೆಸುವಂತೆ ಆದೇಶ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ












Click it and Unblock the Notifications