ಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ

ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು ಸಹ ತನ್ನ ಬಳಿ ಇವೆ ಎಂದು ಓಟಿಸ್ ಪ್ರಕಟಿಸಿದ್ದಾರೆ. ಆದರೆ ಇವುಗಳನ್ನು ತಾನು ಹಾರಾಜು ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಳೆಯ ವಸ್ತುಗಳೊಂದಿಗೆ ದೆಹಲಿ ಈರ್ವಿನ್ ಆಸ್ಪತ್ರೆಯವರು ಕೊಟ್ಟ ಗಾಂಧಿಜಿಯ ರಕ್ತದ ವರದಿ, ಅಲ್ಲಿನ ವಿದ್ಯಾರ್ಥಿಗಳಿಗೆ ಗಾಂಧಿಜಿ ಕಳುಹಿಸಿದ್ದ ಟೆಲಿಗ್ರಾಮ್ ಸಹ ಹರಾಜಿಗೆ ಇಡುತ್ತಿರುವುದಾಗಿ ಓಟಿಸ್ ತಿಳಿಸಿದರು. ತಮ್ಮ ಹರಾಜಿನ ಕವರೇಜಿಗಾಗಿ ಮಾಧ್ಯಮಗಳಿಗೂ ಅಮಕಾಶ ಕಲ್ಪಿಸಲಾಗುತ್ತದೆ ಎಂದರು.
(ಏಜೆನ್ಸೀಸ್)
ನ್ಯೂಯಾರ್ಕಿನಲ್ಲಿ ಗಾಂಧೀಜಿ ವಸ್ತುಗಳು ಹರಾಜಿಗೆ












Click it and Unblock the Notifications