ಬೆಂಗಳೂರಲ್ಲಿ ಅಪಾರ ಪ್ರಮಾಣದ ಹೆರಾಯಿನ್ ಪತ್ತೆ
ಬೆಂಗಳೂರು, ಫೆ.21: ಬೆಂಗಳೂರು ಮೂಲಕ ವಿದೇಶಗಳಿಗೆ ಅಕ್ರಮವಾಗಿ ಹೆರಾಯಿನ್ ಸಾಗಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ದಕ್ಷಿಣಾ ಆಫ್ರಿಕಾದವರನ್ನು ಶನಿವಾರ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಸುಮಾರು 8 ಕೋಟಿಯಷ್ಟು ಬೆಲೆ ಬಾಳುವ 2.5 ಕೆ.ಜಿಯಷ್ಟು ಹೆರಾಯಿನ್ ಮಾದಕ ಪದಾರ್ಥವನ್ನು ಫೆಡೆಕ್ಸ್ ಕೊರಿಯರ್ ಮೂಲಕ ಅಕ್ರಮವಾಗಿ ವಿದೇಶಗಳಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದರು. ಶನಿವಾರ ಮುಂಜಾನೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಹೆರಾಯಿನನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದಾಗ ಬೆಂಗಳೂರಿನ ಕೋರಮಂಗಲ ಫೆಡೆಕ್ಸ್ ಕೊರಿಯರ್ ಕಚೇರಿಯಲ್ಲಿ ಅಕ್ರಮ ಹೆರಾಯಿನ್ ಪತ್ತೆಯಾಗಿದೆ. ತನಿಖೆ ಮುಂದುವರೆಯುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications