203 ಜೋಡಿಗಳಿಗೆ ಮದುವೆ ಮಾಡಿಸಿದ ಜಮೀರ್
ಬೆಂಗಳೂರು, ಫೆ 2: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮುಸ್ಲಿಂ ಸಮುದಾಯದ 203 ಜೋಡಿಗಳಿಗೆ ಭಾನುವಾರ ಸಾಮೂಹಿಕ ವಿವಾಹ ಮಾಡಿಸಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಭರಬಸೆ ನೀಡಿದ್ದೆ. ಅದನ್ನು ಈಗ ಈಡೇರಿಸಲಾಗಿದೆ. ಬಡವರ ಮಕ್ಕಳು ಕೂಡ ಸಂಭ್ರಮದೊಂದಿಗೆ, ಎಲ್ಲ ಅನುಕೂಲಗಳೊಂದಿಗೆ ವಿವಾಹ ಆಗಬೇಕೆನ್ನುವುದು ನನ್ನ ಆಶೆ. ಮುಂದಿನ ಮೇ ತಿಂಗಳಿನಲ್ಲಿ ಹಿಂದೂ ಸಾಮೂಹಿಕ ವಿವಾಹ ಕಾರ್ಯಕ್ರಮ ಕೂಡ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಜಮೀರ್ ಸುದ್ದಿಗಾರರಿಗೆ ತಿಳಿಸಿದರು.
ಸುಮಾರು 2.5 ಕೋಟಿ ರುಪಾಯಿ ಖರ್ಚಿಗಳಲ್ಲಿ ಸಾಮೂಹಿಕ ವಿವಾಹ ನಡೆಸಿದ ಜಮೀರ್, ಗಂಡಿಗೆ ಟೈಟನ್ ವಾಚ್, ಉಂಗುರ, ಎರಡು ಜೊತೆ ್ಬಟ್ಟೆ, ಹೆಣ್ಣಿಗೆ ಆರು ಜೊತೆ ಬಟ್ಟೆ, ಹಾಗೂ ಜೀವನ ನಡೆಸಲು ಪಾತ್ರೆ, ಪದಾರ್ಥಗಳು, ಅಷ್ಟೇ ಅಲ್ಲದೆ ಊಟಿಯಲ್ಲಿ ಐದು ದಿನಗಳಹನಿಮೊನ್ ವ್ಯವಸ್ಥೆ ಕೂಡಾ!!
ಈ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಬಾಲಕ್ರಿಷ್ಣ ಭಾಗವಹಿಸಿದ್ದರು. ಸುಮಾರು 30 ಸಾವಿರ ಜನರಿಗೆ ಭರ್ಜರಿ ಬಾಡೂಟ ಕೂಡ ನಡೆಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications