ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಪತಿ-ಸಾನಿಯಾ ಜೋಡಿಗೆ ಆಸೀಸ್ ಪ್ರಶಸ್ತಿ

By Staff
|
Google Oneindia Kannada News

ಮೆಲ್ಬರ್ನ್, ಫೆ. 1: ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಜೂನಿಯರ್ ವಿಭಾದಲ್ಲಿ ಭಾರತದ ಯುಕಿ ಭಾಂಬ್ರಿ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ, ಮಿಶ್ರ ಡಬಲ್ಸ್ ನಲ್ಲಿ ಭೂಪತಿ- ಸಾನಿಯಾ ಜೋಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವೈಲ್ ಕಾರ್ಡ್ ಪಡೆದು ಅಂಗಣಕ್ಕೆ ಇಳಿದು ಪ್ರಶಸ್ತಿಯನ್ನು ಗಳಿಸಿದ್ದು ಈ ಜೋಡಿಯ ವಿಶೇಷ.

ಇಂದು ಇಲ್ಲಿನ ರಾಡ್ ಲಿವರ್ ಕ್ರೀಡಾಂಗಣದಲ್ಲಿ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯಾವಳಿಯಲ್ಲಿ ಭಾರತದ ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಜಾ ಅವರು 6/3, 6/1 ನೇರ ಸೆಟ್ ಗಳಲ್ಲಿ ರಾಮ್ ಹಾಗೂಡೆಚ್ಚಿ ಜೋಡಿಯನ್ನು ಸೋಲಿಸಿದರು. ಮಹೇಶ್ ಭೂಪತಿ ಅವರು ಒಟ್ಟು 7 ಮಿಶ್ರ ಡಬಲ್ಸ್ ಹಾಗೂ ಒಟ್ಟಾರೆ 11 ವಯಕ್ತಿಕ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ. ಸಾನಿಯಾ ಅವರಿಗೆ ಮೊದಲ ಗ್ರಾಂಡ್ಸ್ ಸ್ಲಾಮ್ಸ್ ಪ್ರಶಸ್ತಿ ಇದಾಗಿದೆ.

ಅದ್ಭುತ ಬಾಲಕ:
ಶನಿವಾರ ನಡೆದ ಬಾಲಕರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಭಾರತದ ಅಗ್ರಶ್ರೇಯಾಂಕಿತ ಆಟಗಾರ ಯುಕಿ ಭಾಂಬ್ರಿ ಅವರು ಜರ್ಮನಿಯ ಅಲೆಕ್ಸಾಂಡ್ರೋಸ್ ಫರ್ಡಿನಾಂಡೋಸ್ ವಿರುದ್ಧ 6/3, 6/1 ನೇರ ಸೆಟ್ ಗಳಿಂದ ಜಯ ಸಾಧಿಸಿ ಚೊಚ್ಚಲ್ ಗ್ರಾಂಡ್ಸ್ ಸ್ಲಾಮ್ ಗಳಿಸಿದ್ದರು.

ಮಹೇಶ್ ಗೆ ಮಿಶ್ರಫಲ:
ಇಂದು ಮಿಶ್ರಡಬಲ್ಸ್ ಗೆದ್ದ ಖುಷಿ ಒಂದೆಡೆಯಾದರೆ, ನಿನ್ನೆ ಗ್ರಾಂಡ್ಸ್ ಸ್ಲಾಮ್ ಡಬಲ್ಸ್ ನಲ್ಲಿ ಸೋತ ದುಃಖ ಮಹೇಶ್ ಅವರನ್ನು ಕಾಡುತ್ತಿದೆ. ಏಳು ವರ್ಷಗಳಿಂದ ಡಬಲ್ಸ್ ಪ್ರಶಸ್ತಿ ಗಳಿಸಬೇಕೆಂಬ ಅವರ ಕನಸು ನನಸಾಗಲಿಲ್ಲ. ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಬಾಬ್ ಬ್ರೆಯಾರ್ನ್ ಮತ್ತು ಮೈಕ್ ಬ್ರೆಯಾನ್ ಜೋಡಿ ವಿರುದ್ಧ 2/6, 5/7, 0/6 ಸೆಟ್ ನಿಂದ ಮಹೇಶ್ ಹಾಗೂ ಮಾರ್ಕ್ ನಾಲ್ಸ್ ಜೊಡಿ ಪರಾಭವಗೊಂಡಿದ್ದರು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X