ಹುಡುಗಿಯರ ಥಳಿಸಿದ ರಾಮಸೇನಾ ಕಾರ್ಯಕರ್ತರು
ಮಂಗಳೂರು, ಜ. 24 : ಹಂಪನಕಟ್ಟೆಯಲ್ಲಿ ಪಬ್ ನಲ್ಲಿ ಅಶ್ಲೀಲ ನೃತ್ಯ ಮಾಡುತ್ತಿದ್ದರೆಂಬ ಕಾರಣ ನೀಡಿ ರಾಮಸೇನೆ ಕಾರ್ಯಕರ್ತರು ಮೂವರು ಹುಡುಗಿಯರನ್ನು ಮನಬಂದಂತೆ ಥಳಿಸಿರುವ ಘಟನೆ ಶನಿವಾರ ನಡೆದಿದೆ.
ಹುಡುಗಿಯರು ಕೆಟ್ಟದಾಗಿ ಬಟ್ಟೆ ಧರಿಸಿದ್ದರು ಮತ್ತು ಮೊದಲೇ ನೀಡಿದ್ದ ಎಚ್ಚರಿಕೆಯನ್ನು ಧಿಕ್ಕರಿಸಿ ನೃತ್ಯ ಮಾಡುತ್ತಿದ್ದರೆಂದು ರಾಮಸೇನೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಬೃಹತ್ ಸಂಖ್ಯೆಯಲ್ಲಿ ಪಬ್ ಗೆ ನುಗ್ಗಿದ ಕಾರ್ಯಕರ್ತರು ಡಾನ್ಸ್ ಮಾಡುತ್ತಿದ್ದ ಹುಡುಗಿಯರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಹುಡುಗಿಯರು ಪ್ರಯತ್ನಿಸಿದರೂ ಬೆನ್ನತ್ತಿ ಕಾರ್ಯಕರ್ತರು ಬಾರಿಸಿದ್ದಾರೆ.
ಪಬ್ ಗೆ ದಾಳಿ ನಡೆಸುವ ಮುನ್ನ ರಾಮಸೇನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಮೂರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications