ರಾಜ್ಯಕ್ಕೆ ಮೊದಲ ಎನ್ ಟಿಪಿಸಿ ಘಟಕ ಸ್ಥಾಪನೆ

ಬೆಂಗಳೂರು, ಜ. 13 : ರಾಜ್ಯದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್ ಟಿಪಿಸಿ) ನಾಲ್ಕು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ಘಟಕ ಸೇರಿದಂತೆ ಜಂಟಿ ಸಹಭಾಗಿತ್ವದಲ್ಲಿ 6900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಐತಿಹಾಸಿಕ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು.

ವಿಜಾಪುರ ಜಲ್ಲೆಯ ಕೂಡಗಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್, ರಾಯಚೂರು ಜಿಲ್ಲೆಯ ಯರಮರಸ್ ಹಾಗೂ ಯದ್ಲಾಪುರದಲ್ಲಿ 2400 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಹಾಗೂ ಉತ್ತರ ಕರ್ನಾಟಕದ ಆರು ಕಡೆ ಒಟ್ಟು 500 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕಗಳ ಸ್ಫಾಪನೆ ಸಂಬಂಧ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಇದೇ ಮೊದಲ ಬಾರಿಗೆ ಎನ್ ಟಿಪಿಸಿ ಕರ್ನಾಟಕದ ಕೂಡಗಿಯಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಎನ್ ಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಶರ್ಮಾ ಮತ್ತು ರಾಜ್ಯ ಸರ್ಕಾರದ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ನ ವ್ಯವಸ್ಫಾಪಕ ನಿರ್ದೇಶಕ ಜಯನರಸಿಂಹ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

(ದಟ್ಸ್ ಕನ್ನಡ ವಾರ್ತೆ)
ವಾರಾಹಿ ಎರಡನೇ ಘಟಕ ನಾಡಿಗೆ ಅರ್ಪಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+