ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷಕ್ಕೆ ವೆನಿಸ್ ನಲ್ಲಿ ಚುಂಬನ ಜಾತ್ರೆ

By Staff
|
Google Oneindia Kannada News

ಲಂಡನ್, ಡಿ. 31 : ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿವಿಧೆಡೆ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದು ವಾಡಿಕೆ. ಆದರೆ, ರೋಮ್ಯಾಂಟಿಕ್ ನಗರವೆಂದೇ ಖ್ಯಾತವಾಗಿರುವ ವೆನಿಸ್ ನಲ್ಲಿ ಡಿ. 31 ರ ಮಧ್ಯರಾತ್ರಿ ಚುಂಬನ ಜಾತ್ರೆಯನ್ನು ಏರ್ಪಡಿಸಲಾಗಿದೆ. ವೆನಿಸ್ ನ ಸೇಂಟ್ ಮಾರ್ಕ್ಸ್ ಸ್ಕ್ವೇರ್ ನಲ್ಲಿ ಈ ಕಾರ್ಯಕ್ರಮಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಕುಣಿಯೋದು, ಕುಡಿಯೋದು, ಕೇಕೆ ಹಾಕುವುದು ಬಿಟ್ಟು ತುಟಿಗೆ ತುಟಿಯನ್ನು ಒತ್ತಿ ನೂತನ ವರ್ಷವನ್ನು ಬರಮಾಡಿಕೊಳ್ಳೋಣ ಬನ್ನಿ ಎನ್ನುತ್ತಿದೆ ವೆನಿಸ್.

ಚುಂಬನಗಳನ್ನು ವಿನಿಮಯಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರಕ್ಕಿಂತ ಅಧಿಕ ಜೋಡಿಗಳು ಪಾಲ್ಗೊಳ್ಳಲಿವೆ. ಕಳೆದ ವರ್ಷ ಈ ಮುತ್ತು ವಿನಿಯ್ಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಇದಕ್ಕೆ ವ್ಯಾಪಕ ಬೆಂಬಲವೂ ಸಿಕ್ಕಿತ್ತು. 2008ರ ವರ್ಷದ ಆಚರಣೆಯಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ 60 ಸಾವಿರ ಜೋಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸಿನ ಜೊತೆಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ವರ್ಷ ಕೂಡ ಕಳೆದ ವರ್ಷ ಹೆಚ್ಚಿನ ಬೆಂಬಲ ದೊರೆಕಿದ್ದು, ಮುತ್ತು ಬದಲಾಯಿಸಿಕೊಳ್ಳಲು ಅನೇಕ ಹದಿಹರೆಯದ ಜೋಡಿಗಳು ಕಾತುರದಿಂದ ಕಾಯತೊಡಿದ್ದಾರೆ.

ಸೇಂಟ್ ಮಾರ್ಕ್ಸ್ ಸ್ಕ್ವೇರ್ ಸಭಾಂಗಣದ ಸೀಟ್ ಗಳು ಈಗಾಗಲೇ ಭರ್ತಿಯಾಗಿವೆ. ಕಳೆದ ಒಂದು ವಾರದಿಂದ ಈ ಕಾರ್ಯಕ್ರಮದ ಸಿದ್ಧತೆ ಕಾರ್ಯ ಶುರುವಾಗಿದೆ. ಈ ಐತಿಹಾಸಿಕ ಗಳಿಗೆಯನ್ನು ಸಂಭ್ರಮದಿಂದ ಕಳೆಯಲು ಸಾವಿರಾರು ಸಂಖ್ಯೆ ಜನ ಕಾರ್ಯಕ್ರಮ ವಿಕ್ಷೀಸಲು, ಅನುಭವಿಸಲು ಆಗಮಿಸುತ್ತಿದ್ದಾರೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರು.

ಹೊಸ ವರ್ಷಾಚರಣೆಯನ್ನು ನೀವು ಅರ್ಥಪೂರ್ಣ ಕಳೆಯಿರಿ, ಕುಡಿದು, ಕುಪ್ಪಳಿಸುವುದನ್ನು ಬದಿಗಿರಿಸಿ. ನೂತನ ವರ್ಷದಿಂದ ಹೊಸ ಹೊಸ ಕಾರ್ಯಕ್ರಮಗಳು, ಸವಾಲುಗಳನ್ನು ಕೈಗೆತ್ತಿಕೊಳ್ಳಿ. ಸಂಭ್ರಮದ ಭರದಲ್ಲಿ ಎಚ್ಚರ ಅಗತ್ಯ. ವೆನಿಸ್ ಗೆ ಹೋಗಲು ಸಾಧ್ಯವಾಗದ್ದಿದ್ದರೇನಂತೆ ನಿಮ್ಮ ಮುದ್ದಿನ ಮಡದಿ. ಪ್ರಿಯತಮೆ, ಪ್ರಿಯತಮನಿಗೆ ನಿಮ್ಮಿಷ್ಟದಂತೆ ಮುತ್ತಿನ ಜಾತ್ರೆಯನ್ನಪ ನಡೆಯಬಹುದಲ್ಲ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X