ಶೆಂಜನ್ ವೀಸಾ ಮೂಲಕ ಸ್ವಿಡ್ಜರ್ ಲ್ಯಾಂಡ್ ಪ್ರವಾಸ
ಬೆಂಗಳೂರು, ಡಿ.20: 24 ದೇಶಗಳು ಒಟ್ಟಿಗೆ ನೀಡುವ Schengen ವೀಸಾ ಪಟ್ಟಿಯಲ್ಲಿ ಸ್ವಿಡ್ಜರ್ ಲ್ಯಾಂಡ್ ಕೂಡ ಸೇರ್ಪಡೆಗೊಂಡಿದೆ. ಇನ್ನು ಮುಂದೆ ಯುರೋಪ್ ಗೆ ಪ್ರಯಾಣ ಬೆಳೆಸುವವರು ಸ್ವಿಡ್ಟರ್ ರಲ್ಯಾಂಡ್ ಗೆ ಬೇರೆ ವೀಸಾ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಡಿಸೆಂಬರ್ ತಿಂಗಳ 15 ನೆ ತಾರೀಖಿನಿಂದ ಸ್ವಿಸ್ ದೂತಾವಾಸ ಕಚೇರಿ ಈ ವೀಸಾ ನೀಡಲು ಆರಂಭಿಸಿದೆ.
ಸರಕಾರದ ವರದಿ ಪ್ರಕಾರ ಕಳೆದ ಸಾಲಿನಲ್ಲಿ ಅಂದರೆ 2007-2008 ರಲ್ಲಿ ಸುಮಾರು 1 ಕೋಟಿ ಪ್ರವಾಸಿಗರು ಯುರೋಪ್ ಮತ್ತು ಸ್ವಿಟ್ಜ ರ್ ಲ್ಯಾಂಡ್ ದೇಶಕ್ಕೆ ಭೇಟಿ ನೀಡಿದ್ದರು. ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂತಾವಾಸ ಕಚೇರಿ ತಿಳಿಸಿದೆ.
ಕಳೆದ ಡಿಸೆಂಬರ್ ನಲ್ಲಿ ಎಂಟು ರಾಷ್ಟ್ರಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದವು. Schengen ವೀಸಾ ಪಟ್ಟಿಯಲ್ಲಿ ಇರುವ ರಾಷ್ಟ್ರಗಳೆಂದರೆ ಝೆಕ್ ರಿಪಬ್ಲಿಕ್, ಲಿತುನಿಯಾ, ಹಂಗೇರಿ, ಲಾಟವಿಯಾ, ಮಾಲ್ಟಾ, ಪೋಲಂಡ್, ಸ್ಲೊವಾಕಿಯ, ಸ್ಲೊವೇನಿಯ, ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐಸ್ ಲ್ಯಾಂಡ್, ಇಟಲಿ, ಲಕ್ಸಂಬರ್ಗ್,ನೆದರ್ಲ್ಯಾಂಡ್, ನಾರ್ವೆ, ಪೋರ್ಚುಗಲ್, ಸ್ವೀಡನ್ ಮತ್ತು ಸ್ಪೇನ್.
(ಏಜೆನ್ಸೀಸ್)












Click it and Unblock the Notifications