ಡಿಸೆಂಬರ್ 21ರಂದು ಪಲ್ಸ್ ಪೋಲಿಯೊ

ಐದು ವರುಷದ ಒಳಗಿನ ಮಗುವಾಗಿದ್ದರೆ ಹಿಂದಿನ ಬಾರಿ ಹಾಕಿಸಿದ್ದರೂ ಈ ಬಾರಿ ತಪ್ಪದೆ ಹಾಕಿಸಿ. ಐದು ವರ್ಷ ದಾಟಿದ್ದರೂ ಹಿಂದೆ ಕೆಲ ಬಾರಿ ಹಾಕಿಸಿರದಿದ್ದರೆ ಈ ಬಾರಿ ಹಾಕಿಸಿ. ಇದು ಶಾಶ್ವತವಾಗಿ ಅಂಗವಿಕಲತೆಯನ್ನು ಉಂಟುಮಾಡುವ ಪೋಲಿಯೋ ರೋಗವನ್ನು ಚಿಗುರಿನಲ್ಲಿಯೇ ಮುರುಟಿಹಾಕುತ್ತದೆ. ನೆನಪಿರಲಿ, ಪೋಲಿಯೋ ವೈರಾಣು ಮನೆ ಮಾಡಿಕೊಂಡಿರುವ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದು.
ಡಿಸೆಂಬರ್ 21ರಂದು ಮಾತ್ರವಲ್ಲ 2009ರ ಫೆಬ್ರವರಿ 1ನೇ ತಾರೀಖಿನಂದು ಕೂಡ ರಾಷ್ಟ್ರದಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೋವನ್ನು ಹೊಡೆದೋಡಿಸುವಲ್ಲಿ ಪಾಲಕರ, ಪೋಷಕರ ಪಾತ್ರ ಹಿರಿದು.
ರಾಜ್ಯದ ಆಡಳಿತ ಕೂಡ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸನ್ನದ್ಧವಾಗಿದ್ದು, 31 ಸಾವಿರ ಕೇಂದ್ರಗಳನ್ನು ಸ್ಥಾಪಿಸಿದೆ. 97 ಸಾವಿರ ಕಾರ್ಯಕರ್ತರನ್ನು ಈ ಕಾರ್ಯಕ್ಕಾಗಿ ನೇಮಿಸಲಾಗಿದೆ ಎಂದು ಕುಟುಂಬ ಕಲ್ಯಾಣ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಹೇಳಿದ್ದಾರೆ.
ರಾಜ್ಯದಾದ್ಯಂತ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಪೋಲಿಯಾ ಹನಿ ಹಾಕಲಾಗುತ್ತದೆ. ಕಾರ್ಯಕರ್ತರು ಕೂಡ ಮನೆಮನೆಗೂ ಭೇಟಿ ನೀಡಿ ವಿಚಾರಿಸಿ ಲಸಿಕೆ ಹಾಕುತ್ತಾರೆ. ಸ್ಲಂಗಳಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮುಂದಿನ ಬಾರಿ ಹಾಕಿಸಿದರಾಯಿತು ಹೇಗಿದ್ದರೂ ಕಳೆದ ಬಾರಿ ಹಾಕಿಸಿದೆಯಲ್ಲ ಎಂದು ತಾತ್ಸಾರ ಮಾಡದೆ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications