ಯಾವುದೇ ಕ್ಷಣದಲ್ಲಿ ಭಾರತ ಪಾಕ್ ಯುದ್ಧ
ನವದೆಹಲಿ, ಡಿ. 20: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಉಗ್ರಗಾಮಿ ಶಿಬಿರಗಳ ಮೇಲೆ ಭಾರತ ಯಾವ ಕ್ಷಣದಲ್ಲಾದರೂ ಎಗರಿ ಬೀಳಬಹುದು ಎಂಬ ಗುಸುಗುಸು ಈಗ ಅಂತಾರಾಷ್ಟ್ರೀಯ ವಲಯಗಳಲ್ಲಿ ಮನೆಮಾತಾಗಿದೆ !
ಪಾಕಿಸ್ತಾನದ ಮೇಲೆ ಪೂರ್ಣಪ್ರಮಾಣದ ಯುದ್ಧವಲ್ಲದಿದ್ದರೂ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ವಾಯುದಾಳಿ ಮಾಡುವುದು ನಿಶ್ಚಿತ ಎಂಬ ಗುಮಾನಿ ವ್ಯಾಪಕವಾಗಿ ಹರಡಿದೆ. ಟೆಕ್ಸಾಸಿನ ಆಸ್ಟಿನ್ ಪ್ರಾಂತ್ಯದಲ್ಲಿರುವ ಸ್ಟ್ರಾಟ್ ಫಾರ್ ಎಂಬ ಅಂತರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆಯು ಭಾರತ ದಾಳಿ ಮಾಡುವ ಸುಳಿವಿನ ವಾಸನೆ ಹಿಡಿದಿದೆ.
ಬೇಹುಗಾರರ ಪ್ರಕಾರ, ಭಾರತದ ಸೇನೆ ಈ ದಾಳಿಗೆ ಸರ್ವರೀತಿಯಿಂದಲೂ ಸಜ್ಜಾಗಿ ನಿಂತಿದೆಯಂತೆ. ಮೇಲಧಿಕಾರಿಗಳಿಂದ ಹಸುರುನಿಶಾನೆಗಷ್ಟೆ ಕಾಯುತ್ತಿದೆ ಎಂದು ಗುಪ್ತಚರ Stratfor ಕಂಪನಿಯ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.
( ದಟ್ಸ್ ಕನ್ನಡ ವಾರ್ತೆ)












Click it and Unblock the Notifications