ಬುಷ್ ಗೆ ಶೂ ಎಸೆದ ಜೈದಿ ಈಗ ಹೀರೋ

ಜಾರ್ಜ್ ಬುಷ್ ಇರಾಕ್ ಭೇಟಿ ನೀಡಿದ ವೇಳೆ ಬಾಗ್ದಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಬೇಕು ಎನ್ನುವಷ್ಟರಲ್ಲಿ ಈಜಿಪ್ತ್ ಮೂಲದ ವಾರ್ತಾ ವಾಹಿನಿಯ ವರದಿಗಾರ ಮುಂತೆಜಾರ್-ಆಲ್- ಜೈದಿ ಬುಷ್ ಅವರನ್ನು ಮನಬಂದಂತೆ ನಿಂದಿಸಿ ತನ್ನೆರಡು ಶೂಗಳನ್ನು ಅವರತ್ತ ಬೀಸಿದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಜಗತ್ತಿನಾದ್ಯಂತ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಆದರೆ ಸೌದಿ ಸೇರಿ ಮುಸ್ಲಿಮರು ಹೆಚ್ಚಿರುವ ರಾಷ್ಟ್ರಗಳಲ್ಲಿ ಶೂ ಎಸೆದ ಪತ್ರಕರ್ತನಿಗೆ ಎಲ್ಲಿಲ್ಲದ ರಾಜ ಮರ್ಯಾದೆ ದೊರೆಯತೊಡಗಿದೆ. ಯಾವುದೇ ಮಹತ್ಸಾಧನೆಯನ್ನೂ ಮಾಡದೇ ಇನ್ನೊಬ್ಬರಿಗೆ ಅವಮಾನ, ಅನ್ಯಾಯ ಮಾಡಿದರೆ ಪ್ರಶಂಸೆಯ ಸುರಿಮಳೆ ಗೌರವ ಇಂತಹ ಪೂರ್ವಗ್ರಹ ಪೀಡಿತ ರಾಷ್ಟ್ರ ಮಾತ್ರ ಸಿಗಲಿದೆ.
ಈಜಿಪ್ತ್ ನ 20 ಹರೆಯ ಅಮಲ್ ಸಾದ್ ಗುಮಾ ಶೂ ಎಸೆದ ಭೂಪನನ್ನು ಮದುವೆಯಾಗಲು ಮುಂದೆ ಬಂದಿರುವ ಗಟ್ಟಿಗಿತ್ತಿ. ಆತ ನಮ್ಮ ಪಾಲಿನ ಹೀರೋ, ಅತನ ಜೊತೆಗೆ ಜೀವನ ಕಳೆಯಲು ನಾನು ಸಿದ್ದ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾಳೆ. ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಶೂ ಜೈದಿ ಮುಸ್ಲಿಮ್ ರ ಸ್ವಾಭಿಮಾನ ಮತ್ತು ಗೌರವವನ್ನು ಎತ್ತಿಹಿಡಿದಿದ್ದಾನೆ.
ನಿಜ ಜೀವನ ಹೀರೋ ಜತೆಗೆ ಜೀವನ ಕಳೆಯುವುದು ಹೆಮ್ಮೆಯ ಸಂಗತಿಯಲ್ಲವೇ ಎಂದು ರೈಟರ್ಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ. ಮಗಳು ಕೋರಿಕೆಗೆ ಅಕೆ ತಂದೆ ಸಾದ ಗುಮಾ ಕೂಡ ತಥಾಸ್ತು ಎಂದಿದ್ದು, ಜೈದಿ ಮದುವೆಗೆ ಒಪ್ಪಿದಲ್ಲಿ ಶೀಘ್ರದಲ್ಲಿ ಆತನಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆ ಎಂದು ಹೇಳಿದ್ದಾನೆ. ಸಾಕಲ್ಲವೇ ರಾಜಮರ್ಯಾದೆ ?, ಆದರೆ ಜೈದಿ ಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವ ಸುದ್ದಿ ವರದಿಯಾಗಿಲ್ಲ.
ಅಷ್ಟೆ ಅಲ್ಲ ಆತನ ಎರಡು ಶೂಗಳ ಬೇಡಿಕೆ ಬಂದಿದೆ, ಅದರ ಬರೋಬ್ಬರಿ 47.5 ಕೋಟಿ ರುಪಾಯಿ. ಸೌದಿ ಅರೇಬಿಯಾ ರಾಷ್ಟ್ರದ ನಿವೃತ್ತ ಶಾಲಾ ಶಿಕ್ಷಕ ಮೊಹಮ್ಮದ್ ಮುಖಫಾ ಇಷ್ಟು ಭಾರಿ ಮೊತ್ತದ ಬೇಡಿಕೆ ನೀಡಿ ಆ ಶೂಗಳನ್ನು ಕೊಳ್ಳಲು ಮುಂದಾಗಿದ್ದಾನೆ. ಆ ಎರಡು ಶೂಗಳು ತನ್ನ ಎಲ್ಲಾ ಆಸ್ತಿಗಿಂತ ಪವಿತ್ರವಂತೆ, ನನಗೆ ಅದು ಸ್ವಾತಂತ್ರ್ಯದ ಪದಕಗಳು ಅದನ್ನು ಮ್ಯೂಸಿಯ೦ ನಲ್ಲಿ ಇಡುತ್ತೇನೆ ಎಂದು ಮುಖಫಾ ಹೇಳಿಕೊಂಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
ಬುಷ್ ಚಪ್ಪಲಿ ಸೇವೆ ವೀಕ್ಷಣೆಗೆ ಜನಜಾತ್ರೆ
ಬೀಸಿದ ಚಪ್ಪಲಿ ತಪ್ಪಿಸಿಕೊಂಡ ಜಾರ್ಜ್ ಬುಷ್












Click it and Unblock the Notifications