ಇನ್ನೂ 20 ಉಗ್ರರಿದ್ದಾರೆ ಎಚ್ಚರಿಕೆ!:ನ್ಯೂ. ಟೈಮ್ಸ್
ನ್ಯೂಯಾರ್ಕ್, ಡಿ. 10 : ಮುಂಬೈ ಭಯೋತ್ಪಾದನಾ ದಾಳಿಗೆ ಲಷ್ಕರ್ ಇ ತೊಯ್ಬಾ ಸಂಘಟನೆ ಒಟ್ಟು 30 ಮಾನವ ಬಾಂಬ್ ಉಗ್ರರನ್ನು ನೇಮಿಸಿತ್ತು. ಒಂಬತ್ತು ಉಗ್ರರನ್ನು ಕಾರ್ಯಾಚರಣೆ ವೇಳೆ ಹತ್ಯೆ ಮಾಡಲಾಗಿದೆ. ಆದರೆ ಉಳಿದ 20 ಮಂದಿ ಉಗ್ರರ ಗುಂಪು ಭಾರತದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮುಂಬೈ ಪೊಲೀಸರಿಗೆ ಉಳಿದ 20 ಮಂದಿ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ನಿರಾಕರಿಸಲು ಸಾಧ್ಯವಾಗಿಲ್ಲ. ಸಿಕ್ಕಿ ಬಿದ್ದ ಉಗ್ರ ಅಜ್ಮಲ್ ಅಮೀರ್ ಕಸಬ್ ವಿಚಾರಣೆ ನಂತರ ತಿಳಿದ ಬಂದ ಸತ್ಯವಿದು ಎಂದು ಪತ್ರಿಕೆ ವರದಿ ಮಾಡಿದೆ. ಆದರೆ, ಉಗ್ರರ ಭಾರತದಲ್ಲಿ ನುಸುಳಿದ್ದಾರೆ ಎನ್ನುವ ಸಂಗತಿಗಳು ತಿಳಿದು ಬಂದಿದೆ ಎಂದು ಮುಂಬೈನ ಪೊಲೀಸ್ ಮೂಲಗಳು ತಿಳಿಸಿವೆ ಎಂದು ಸಹ ಪತ್ರಿಕೆ ವರದಿ ಮಾಡಿದೆ.
ಉಳಿದ 20 ಮಂದಿ ಉಗ್ರರ ಪತ್ತೆಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸಲು ಕಾರ್ಯಸೂಚಿ ಹಾಕಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಮುಂಬೈ ಮೇಲೆ ದಾಳಿ ನಡೆಸಲು ಒಟ್ಟು 30 ಮಂದಿಯನ್ನು ನೇಮಿಸಿತ್ತು. ಭಾರತಕ್ಕೆ ಭಾರಿ ಮಟ್ಟದ ನಷ್ಟ ಉಂಟು ಮಾಡಲು ಲಷ್ಕರ್ ಯೋಜನೆ ರೂಪಿಸಿತ್ತು ಎಂದು ಪತ್ರಿಕೆ ಹೇಳಿದೆ. ಕಳೆದ ತಿಂಗಳ ನ 26ರ ಮುಂಬೈ ಭಯೋತ್ಪಾದನೆಯಲ್ಲಿ 195 ಮಂದಿ ಮೃತಪಟ್ಟಿದ್ದರು. 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸುಮಾರು 4000 ಕೋಟಿ ರುಪಾಯಿ ನಷ್ಟ ಉಂಟಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಉಗ್ರರೆಲ್ಲರೂ ಪಾಕಿಗಳು, ಮುಂಬೈ ಪೊಲೀಸ್












Click it and Unblock the Notifications