ಮುಸ್ಲಿಂ ಹೆಸರು ಬಳಸಿ ಒಬಾಮಾ ಪ್ರಮಾಣ ವಚನ?
ನ್ಯೂಯಾರ್ಕ್, ಡಿ.9 : ಮುಸ್ಲಿಮರ ಮೇಲಿರುವ ಆಪಾದನೆಯನ್ನು ಹೋಗಲಾಡಿಸಲು ಜಗತ್ತಿನ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತಂದೆ(ಹುಸೇನ್) ಹೆಸರನ್ನು ಸೇರಿ ಪ್ರಮಾಣ ವಚನ ಸ್ವೀಕರಿಸಿ ಎಂದು ಅಮೆರಿಕದ ಮುಸ್ಲಿಂ ಮುಖಂಡರು ಬರಾಕ್ ಒಬಾಮಾ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
ಈದ್-ಉಲ್-ಜುವಾ(ಬಕ್ರೀದ್) ಹಬ್ಬದ ಪ್ರಯುಕ್ತ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮುಸ್ಲಿಂ ಮುಖಂಡ ಶೇಖ್ ಉಬೇದ್ ಅವರು, ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಒತ್ತಾಯಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ. ಮುಂದಿನ ವರ್ಷ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನಿಮ್ಮ ಸಂಪೂರ್ಣ ಹೆಸರು ಅಂದರೆ ಬರಾಕ್ 'ಹುಸೇನ್' ಒಬಾಮಾ ಎಂದು ಹೇಳುವ ಮೂಲಕ ಅಧಿಕಾರದ ಸ್ವೀಕರಿಸಿ ಎಂದು ಕೇಳಿಕೊಂಡಿದ್ದಾರೆ. ಈ ರೀತಿ ಪ್ರಮಾಣ ವಚನ ಸ್ವೀಕರಿಸುವುದರಿಂದ ಇಸ್ಲಾಂ ಧರ್ಮದ ಮೇಲೆರಿರುವ ಭಯ ಮತ್ತು ಆಪಾದನೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಅವರ ತಮ್ಮ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ನಿಮ್ಮ ಅಡಳಿತದ ಸುವರ್ಣ ಯುಗ ಆರಂಭವಾಗುತ್ತದೆ. ಇಸ್ಲಾಂ ಮೇಲಿನ ಆಪಾದನೆಯನ್ನು ಅಳಿಸುವ ಜತೆಗೆ ಜಾತೀಯತೆ, ಲಿಂಗ ಬೇಧ ತೊಡೆದು ಹಾಕಿ ಹಾಗೂ ಮಾನವ ಹಕ್ಕುಗಳಿಗೆ ಸ್ಪಷ್ಟವಾದ ನೆಲೆಯನ್ನು ಕಲ್ಪಿಸಿಕೊಡಿ ಎಂದು ಮೌಲ್ವಿಗಳು ಬರಾಕ್ ಒಬಾಮಾ ಅವರನ್ನು ಒತ್ತಾಯಿಸಿದ್ದಾರೆ. ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷ ಗಾದಿಗೆ ಏರಿದ್ದು, ಮುಸ್ಲಿಂ ಜನಾಂಗ ತುಂಬಾ ಸಂತಸ ಪಡುತ್ತದೆ ಎಂದು ಮುಖಂಡರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇದನ್ನೂ ಓದಿ:
ಒಬಾಮ ಒಬ್ಬ ಸೀಕ್ರೆಟ್ ಮುಸ್ಲಿಂ
ಹಿಂದೂ ಸಂಘಗಳಿಗೆ ಹಣ ಹರಿಯುತ್ತಿದೆ ,ಎಚ್ಚರ












Click it and Unblock the Notifications