ಕೋಯಮತ್ತೂರಿನಲ್ಲಿ ಮೂವರು ಶಂಕಿತ ಉಗ್ರರ ಬಂಧನ

Three suspects arrested in Coimbatore
ಕೋಯಮತ್ತೂರು, ಡಿ. 2 : ರೈಲ್ವೆ ನಿಲ್ದಾಣದ ಎದುರಿಗಿರುವ ಶ್ರೀಲಂಕಾ ಹೊಟೇಲಿನಲ್ಲಿ ಕಳೆದ 20 ದಿನಗಳಿಂದ ಬೀಡುಬಿಟ್ಟಿದ್ದ ಮೂವರು ಶಂಕಿತ ಉಗ್ರಗಾಮಿಗಳನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೇರಳ ಮೂಲದ ಮೂವರಿಂದ ಅಂತಾರಾಷ್ಟ್ರೀಯ ಸಂಪರ್ಕವಿರುವ ಮೊಬೈಲು ಮತ್ತು ಕೊಯಮತ್ತೂರಿನ ನಕಾಶೆಯನ್ನು ವಶಪಡಿಸಿಕೊಳ್ಳಲಾಗಿದೆ.

ಕ್ಯಾಲಿಕಟ್ ನಿಂದ ಬಂದಿರುವ ಅಬ್ದುಲ್ ಅಮೀನ್ (21), ಇಕ್ಬಾಲ್ ಅಹ್ಮದ್ (20) ಮತ್ತು ಜಮ್ಶೀಲ್ (21) ಬಂಧಿತರು. ತಾವು ನಗರಕ್ಕೆ ಟೆಲಿಫೋನ್ ಬೂತ್ ಇಡಲು ಬಂದಿದ್ದಾಗಿ ಹೇಳಿ ಪೊಲೀಸರನ್ನು ದಾರಿತಪ್ಪಿಸಲೆತ್ನಿಸಿದ್ದಾರೆ. ವಿಚಾರಣೆ ತೀವ್ರಗೊಳಿಸಿದಾಗ, ವೆಂಕಟೇಶ್ ಎಂಬ ಆಟೋ ಚಾಲಕನ ಹೆಸರಿನಲ್ಲಿ ಮೊಬೈಲ್ ಕೊಂಡಿದ್ದು, ಗಲ್ಫ್ ದೇಶಗಳಲ್ಲಿ ಕೆಲ ವ್ಯಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗಿ ಬಾಯಿಬಿಟ್ಟಿದ್ದಾರೆ.

ಶಂಕಿತರಿಂದ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದು, ರಿಲಾಯನ್ಸ್ ಮತ್ತು ಬಿಎಸ್ಎನ್ಎಲ್ ಗಳಿಂದ ಕರೆ ಮಾಡಿರುವ ವಿವರಗಳನ್ನು ಪೊಲೀಸರು ತರಿಸಿಕೊಳ್ಳುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕೆ.ಸಿ.ಮಹಾಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚೆನ್ನೈನಿಂದ 'ಕ್ಯೂ' ಬ್ರಾಂಚ್ ಪೊಲೀಸರು ಕೊಯಮತ್ತೂರಿಗೆ ಧಾವಿಸಿದ್ದಾರೆ.

1998 ಫೆಬ್ರವರಿ 14ರಂದು ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 46 ಜನ ಹತರಾಗಿದ್ದರು ಮತ್ತು 200ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದರು. ನವೆಂಬರ್ 26ರಂದು ಮುಂಬೈನಲ್ಲಿ ಭಯತ್ಪಾದಕರಿಂದ ದಾಳಿ ನಡೆದ ನಂತರ ರಾಷ್ಟ್ರದಾದ್ಯಂತ ತೀವ್ರ ನಿಗಾ ವಹಿಸಲಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+