ಬಿಎಂಎಸ್ ಸಿಇಯಲ್ಲಿ ಪೂರ್ವವಿದ್ಯಾರ್ಥಿಗಳ ಸಂಗಮ

ಬೆಂಗಳೂರ, ಡಿ.2: ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಅಲ್ಯುಮ್ನಿ ಡೇ ಹಾಗೂ ವಿದ್ಯಾರ್ಥಿವೇತನ ಪ್ರದಾನ ಸಮಾರಂಭ ಶನಿವಾರ ಡಿ.6 ರಂದು ನಡೆಯಲಿದೆ. ಬಿಎಂಎಸ್ ಕಾಲೇಜಿನ ಅಮೆರಿಕದ ಹಳೆಯ ವಿದ್ಯಾರ್ಥಿಗಳು ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಬೆಂಗಳೂರು ಹಳೆಯ ವಿದ್ಯಾರ್ಥಿಗಳ ಸಂಘ ಈ ಕಾರ್ಯಕ್ರಮವನ್ನು ಜಂಟಿಯಾಗಿ ಏರ್ಪಡಿಸಿವೆ.

ವಿದ್ಯಾರ್ಥಿ ದಿನಾಚರಣೆ ಹಾಗೂ ವಿದ್ಯಾರ್ಥಿವೇತನ ಪ್ರದಾನ ಸಮಾರಂಭವನ್ನು ಅಂದು ಸಂಜೆ 5ಗಂಟೆಗೆ ಬೆಂಗಳೂರು ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ಬಿಎಂಎಸ್ ಶ್ರೀನಿವಾಸಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ವಿದ್ಯಾರ್ಥಿವೇತನ ಪ್ರದಾನ ಕಾರ್ಯಕ್ರಮ ಶನಿವಾರ ಸಂಜೆ 6 ಗಂಟೆ ಪ್ರಾರಂಭವಾಗಲಿದೆ. ಈ ವರ್ಷ ಅಮೆರಿಕ ಹಳೆಯ ವಿದ್ಯಾರ್ಥಿಗಳ ಸಂಘ 23 ವಿದ್ಯಾರ್ಥಿವೇತನಗಳನ್ನು ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ 8 ವಿದ್ಯಾರ್ಥಿವೇತನಗಳನ್ನು ನೀಡಲಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ವೃಂದವು ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಪ್ರತಿವರ್ಷ ನೀಡುತ್ತಾ ಬಂದಿದೆ.

ಉದ್ಯಮಿ,ಸಮಾಲೋಚಕ,ಶಿಕ್ಷಕ ಹಾಗೂ ಇನ್ಸ್ ಟಿಟ್ಯೂಟ್ ಆಪ್ ಲೀಡರ್ ಷಿಪ್ ಮತ್ತು ಇನ್ಸ್ ಟಿಟ್ಯೂಷನಲ್ ಡೆವಲಪ್ ಮೆಂಟ್ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಕೆ.ಜಯರಾಮ್, ಟೆಕ್ಸಾಸ್ ನ ಎ ಮತ್ತು ಎಂ ವಿಶ್ವವಿದ್ಯಾಲಯದ ಸಹಾಯಕ ಡೀನ್ ಡಾ.ಎನ್.ಕೆ.ಆನಂದ್ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನ್ಯಾಯಮೂರ್ತಿ, ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ ನ ಆಡಳಿತ ಮುಖ್ಯಸ್ಥ ಆರ್.ಗುರುರಾಜನ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಬಿಎಂಎಸ್ನ ಹಳೆಯ ವಿದ್ಯಾರ್ಥಿ ಎಂ.ಕೃಷ್ಣಮೂರ್ತಿ ಅವರನ್ನು ಮೊಬೈಲ್ ಫೋನ್ ಸಂಖ್ಯೆ 99452 46028 ಮೂಲಕ ಸಂಪರ್ಕಿಸಬಹುದು.

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+