ಮುಂಬೈ ದಾಳಿ ಪಾಕ್ ನಿಂದ ಇಮೇಲ್
ಮುಂಬೈ, ನ. 30 : ಇನ್ನೂ ಕೆಲವೆ ಗಂಟೆಗಳಲ್ಲಿ ಮುಂಬೈನ ತಾಜ್ ಹೋಟೆಲ್, ಒಬೆರಾಯ್ ಹೋಟೆಲ್ ಹಾಗೂ ನಾರಿಮನ್ ಹೌಸ್ ಮೇಲೆ ದಾಳಿ ನಡೆಸುತ್ತೇವೆ ಎಂಬ ಬೆದರಿಕೆ ಇ-ಮೇಲ್ ಸಂದೇಶ ಪಾಕಿಸ್ತಾನದಿಂದ ಎಂಬ ಮಹತ್ವದ ಅಂಶವನ್ನು ಫೊರೆನ್ಸಿಕ್ ತಜ್ಞರು ಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಸಂಘಟನೆ ಡೆಕ್ಕನ್ ಮುಜಾಹಿದೀನ್ ಈ ಕೃತ್ಯದ ಹೊಣೆಹೊತ್ತುಕೊಂಡಿದ್ದು, ರಷ್ಯಾದಲ್ಲಿ ತರಬೇತಿ ಹೊಂದಿದ ಪಾಕಿಸ್ತಾನದ ಪರಿಣಿತ ಉಗ್ರರು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ.
ಶನಿವಾರ ಫೊರೆನ್ಸಿಕ್ ತಜ್ಞರ ನಡೆಸಿದ ಶೋಧನೆಯ ಪ್ರಕಾರ ರಷ್ಯಾ ದೇಶದ ಇ-ಮೇಲ್ ಐಡಿ ಹೊಂದಿದ ವ್ಯಕ್ತಿಗಳು ಪಾಕಿಸ್ತಾನದಿಂದ ಸೈಬರ್ ಕೇಂದ್ರದಿಂದ ಭಾರತದ ಮಾಧ್ಯಮದ ಕಚೇರಿಗೆ ಮುಂಬೈ ದಾಳಿ ನಡೆಸುವ ಈಮೇಲ್ ರವಾನಿಸಿದ್ದಾರೆ. ಇ-ಮೇಲ್ ತಲುಪಲಿದ ಕೆಲವೆ ನಿಮಿಷಗಳಲ್ಲಿ ಮುಂಬೈಯಲ್ಲಿ ಉಗ್ರರ ಅಟ್ಟಹಾಸ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications