ರಾಹುಲ್ ಮಹಾತ್ಮಾ ಗಾಂಧಿ ಗೆ ಸಮಾನ :ಲಾಲು

ನವದೆಹಲಿ, ನ. 21 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಈ ದೇಶದ ಬಹು ದೊಡ್ಡ ಆಸ್ತಿ. ಮಹಾತ್ಮಾ ಗಾಂಧಿ ಮಾಡಿರುವ ಕೆಲಸವನ್ನು ಈಗ ರಾಹುಲ್ ಗಾಂಧಿ ಮುಂದುವರಿಸುತ್ತಿದ್ದಾರೆ, ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಸಮಾನ ಎಂದು ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಹಿಂದೂಸ್ತಾನ್ ಟೈಮ್ಸ್ ದಿನ ಪತ್ರಿಕೆಯ ಹಮ್ಮಿಕೊಂಡಿದ್ದ ಲೀಡರ್ ಶಿಫ್ ಸಮಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತುನಾಡುತ್ತಿದ್ದ ಅವರು, ರಾಹುಲ್ ಗಾಂಧಿ ಭಾರತದ ಭವಿಷ್ಯದ ನಾಯಕ ಎಂದು ಕೊಂಡಾಡಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತ ಕಂಡ ಅಪರೂಪದ ರಾಜಕಾರಣಿ. ಪ್ರಧಾನಮಂತ್ರಿಯಂತ ಮಹೋನ್ನತ ಪದವಿ ಕಾಲಡಿ ಬಂದಾಗ ನಯವಾಗಿ ನಿರಾಕರಿಸಿ ಅಸಾಮಾನ್ಯ ಮಹಿಳೆ. ಇಂತಹ ವ್ಯಕ್ತಿಯೊಬ್ಬರು ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದರೆ ಆ ಸ್ಥಾನದ ಗೌರವ ಮತ್ತಷ್ಟು ಹೆಚ್ಚಲಿದೆ ಎಂದು ಲಾಲು ಪ್ರಸಾದ್ ಯಾದವ್ ಪ್ರಶಂಸೆ ವ್ಯಕ್ತಪಡಿಸಿದರು. ಸೋನಿಯಾಗಾಂಧಿ ಭಾರತದ ಮುಂದಿನ ಪ್ರಧಾನಮಂತ್ರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಭವಿಷ್ಯ ನುಡಿದರು.

ರಾಜ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಲಾಲು, ರಾಜ್ ಠಾಕ್ರೆ ಆಡುತ್ತಿರುವ ಸರ್ಕಸ್ ನಿಲ್ಲಸಬೇಕು. ಭಾರತದ ಜನರು ಯಾರು ಎಲ್ಲಿ ಬೇಕಾದರೂ ನೆಲೆಸಬಹುದು. ಇಡೀ ಭಾರತವೇ ಭಾರತೀಯರ ಸ್ವತ್ತು. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ನೇರವಾಗಿ ರಾಜ್ ಠಾಕ್ರಗೆ ಎಚ್ಚರಿಕೆ ನೀಡಿದರು. ರಾಜ್ ಠಾಕ್ರೆಗೆ ಬಗ್ಗೆ ಅಷ್ಟೊಂದು ತೆಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಲಾಲು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+