ಹೃದಯವೇ ಇಲ್ಲದೆ ಜೀವಿಸಿದ ಯುಎಸ್ ಬಾಲೆ
ಮಿಯಾಮಿ, ನ. 20 : ನಾಲ್ಕು ತಿಂಗಳ ಕಾಲ ಹೃದಯವೇ ಇಲ್ಲದೇ ಬದುಕಿದ 14 ಹರೆಯದ ಪೋರಿ. ಈ ವಿಷಯ ನಂಬಲು ಸಾಧ್ಯವೇ? ನಂಬಲೇ ಬೇಕು. ಈ ಘಟನೆ ನಡೆದಿದ್ದು ಅಮೇರಿಕಾದ ಮಿಯಾಮಿ ನಗರದಲ್ಲಿ. ದಕ್ಷಿಣ ಕ್ಯಾಲಿಫೋರ್ನಿಯಾ ನಗರದಿಂದ ಬಂದ ಈಕೆಯ ಹೆಸರು ಡಿಜ್ಯನ್ ಸಿಮನ್ಸ್. ಈಕೆಗೆ ಜುಲೈ ತಿಂಗಳಲ್ಲಿ ಹೃದಯದಲ್ಲಿ ನೋವು ಉಂಟಾಗಿ ಮಿಯಾಮಿ ಯಲ್ಲಿನ ಹೋಲ್ಟ್ ಚಿಲ್ಡ್ರೆನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದರು ಅದು ಫಲಕಾರಿಯಗಲಿಲ್ಲ. ಹೊಸ ಹೃದಯವನ್ನು ಜೋಡಿಸಿದರು ಅದು ಫಲಕಾರಿಯಾಗದಿದ್ದಾಗ ಹೃದಯವನ್ನೇ ದೇಹದಿಂದ ತೆಗೆದು ಬಿಟ್ಟರು.
ರಕ್ತ ಸರಬರಾಜಾಗಲು ಕ್ಯಾಲಿಫೋರ್ನಿಯಾದಿಂದ ಇದಕ್ಕೆ ಸಂಬಂಧಿಸಿದ ಯಂತ್ರವನ್ನು ತರಿಸಲಾಯಿತು. ಇದು ನಡೆದಿದ್ದು ಜುಲೈ ತಿಂಗಳ 2ನೇ ತಾರೀಕಿನಂದು. ಅಂದಿನಿಂದ ಕೃತಕ ರಕ್ತ ಸಾಗಿಸುವ ಯಂತ್ರದಿಂದ ಇನ್ನೊಂದು ಹೃದಯ ಜೋಡಿಸುವವರೆಗೂ ಹೃದಯವೆ ಇಲ್ಲದೆ ಸುಮಾರು ನಾಲ್ಕು ತಿಂಗಳು ಕಳೆದಳು. ಅಕ್ಟೋಬರ್ 29ನೇ ತಾರೀಕಿಗೆ ಮತ್ತೊಂದು ಶಸ್ತ್ರಚಿಕಿತ್ತ್ಸೆ ನಡೆಸಿ ಹೃದಯ ಜೋಡಿಸುವಲ್ಲಿ ವೈದ್ಯರು ಯಶಸ್ವಿ ಆಗಿದ್ದಾರೆ.
ಅಂದರೆ 118 ದಿನ ಈಕೆ ಹೃದಯ ಇಲ್ಲದೆ ಬದುಕಿ ಉಳಿದಳು. ಅಕ್ಟೋಬರ್ 29ನೇ ತಾರೀಕಿನಿಂದ ಈಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿಲ್ಲವಾದರೂ ಆರೋಗ್ಯವಾಗಿ ಓಡಾಡಿಕೊಂಡು ಇದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications