ಬಿಸಿಸಿಐ ತಾಂತ್ರಿಕ ಸಮಿತಿಗೆ ಗಂಗೂಲಿ
ಮುಂಬೈ, ನ. 20 : ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಮಾಜಿ ನಾಯಕ ಬಂಗಾಲಿ ಮಹಾರಾಜ ಸೌರವ್ ಗಂಗೂಲಿ ಇದೀಗ ಬಿಸಿಸಿಐ ತಾಂತ್ರಿಕ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಸ್ಪಷ್ಟಪಡಿಸಿರುವ ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್ ಗಂಗೂಲಿ ಅವರನ್ನು 6ನೇ ಸದಸ್ಯರಾಗಿ ಬೋರ್ಡ್ ಗೆ ಆಯ್ಕೆಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿನ ಕ್ರಿಕೆಟ್‌ನ ತಾಂತ್ರಿಕ ಅಂಶಗಳನ್ನು ಪರಾಮರ್ಶಿಸುವುದು ಸಮಿತಿಯ ಸದ್ಯದ ಕೆಲಸವಾಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ನೀತಿ ನಿಯಮಗಳನ್ನು ರೂಪಿಸುವುದು ಸಮಿತಿ ಮುಖ್ಯ ಕೆಲಸವಾಗಿದೆ.
ತಾಂತ್ರಿಕ ಸಮಿತಿಯ ಪದಾಧಿಕಾರಿಗಳು
* ಸುನೀಲ್ ಗವಾಸ್ಕರ್ (ಅಧ್ಯಕ್ಷ)
* ಚೇತನ್ ಶರ್ಮಾ (ಉತ್ತರ)
* ಡಾ. ಎಂ ವಿ ಶ್ರೀಧರ್ (ದಕ್ಷಿಣ)
* ಬಿಮನ್ ಚಟರ್ಜಿ (ಪಶ್ಚಿಮ)
* ಮಿಲಿಂದ ರೇಗೆ (ಕೇಂದ್ರ)
* ಕೆ, ಶ್ರೀಕಾಂತ್ (ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿಂತಿ ಅಧ್ಯಕ್ಷ)
* ಸೌರವ್ ಗಂಗೂಲಿ
* ವಿ ಕೆ ರಾಮಸ್ವಾಮಿ (ಮಾಜಿ ಅಂಪೈರ್)
* ಎನ್ ಶ್ರೀನಿವಾಸ್ (ಬಿಸಿಸಿಐ ಕಾರ್ಯದರ್ಶಿ)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications