ಪಿಂಕ್ ಸ್ಲಿಪ್ ಪ್ರಶ್ನಿಸಿ ಕೋರ್ಟಿಗೆ ಟೆಕ್ಕಿ

ನವದೆಹಲಿ, ನ 17 :ಉದ್ಯೋಗದಿಂದ ವಜಾ ಆಗಿರುವ ಸಾಫ್ಟ್ ವೇರ್ ನೌಕರನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮೇಲೆ ಮೊಕದ್ದಮೆ ಹೂಡಿರುವ ಸುದ್ದಿ ವರದಿಯಾಗಿದೆ. ಅಮೆರಿಕಾದ ಲೆಹಮನ್ಸ್ ಬ್ರದರ್ಸ್ ಹೋಲ್ಡಿಂಗ್ ಇಂಕ್ ಕಂಪನಿಯು ತನ್ನಲ್ಲಿ ಕೆಲಸ ಮಾಡಿಕೊಂಡಿದ್ದ ಸಾಫ್ಟ ವೇರ್ ಅಭಿವೃದ್ಧಿ ನಿರತ ಕೆಲಸಗಾರರನ್ನು ಸಾರಾಸಗಟಾಗಿ ಕೆಲಸದಿಂದ ಕಿತ್ತುಹಾಕಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಆತ ಪ್ರಶ್ನಿಸಿದ್ದಾನೆ.

ತನಗೆ ಹಾಗೂ ತನ್ನ ಜತೆಗಾರ ಕೆಲಸಗಾರರಿಗೆ ಉಂಟಾಗಿರುವ ನಷ್ಟ ತುಂಬಿಕೊಡುವಂತೆ ಆತ ವಾದ ಮಂಡಿಸಿದ್ದು 5 ಮಿಲಿಯನ್ ಡಾಲರುಗಳ ಪರಿಹಾರ ನೀಡಬೇಕೆಂದು ಕೋರಿದ್ದಾನೆ.ಮೊಕದ್ದಮೆ ಹೂಡಿರುವ ವ್ಯಕ್ತಿಯ ಹೆಸರು ಬೆರೆನ್ ಷ್ಟಿಯನ್. ಲೆಹಮನ್ಸ್ ಬ್ರದರ್ಸ್ ಹೋಲ್ಡಿಂಗ್ ಒಂದು ಬಂಡವಾಳ ಹೂಡಿಕೆ ಬ್ಯಾಂಕ್. ಈ ಬ್ಯಾಂಕು ಈಗ ಹೆಚ್ಚೂ ಕಡಿಮೆ ದಿವಾಳಿ ಆಗಿದೆ. ಹಾಗಾಗಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ. ಹೀಗೆ, ಕೆಲಸ ಕಳೆದುಕೊಂಡ 100 ಮಂದಿ ಸಾಫ್ಟ್ ವೇರ್ ನೌಕರರ ಪರವಾಗಿ ಬೆರೆನ್ ಷ್ಟಿಯನ್ ದಾವೆ ಹೂಡಿದ್ದಾನೆ.

ದಕ್ಷಿಣ ನ್ಯೂಯಾರ್ಕಿನಲ್ಲಿರುವ ಬ್ಯಾಂಕ್ರಪ್ರಟ್ಸಿ ನ್ಯಾಯಾಲಯದಲ್ಲಿ ಈ ದಾವೆ ದಾಖಲಾಗಿದೆ. ಅಮೆರಿಕೆಯ ನೇಮಕಾತಿ ನಿಯಮಗಳ ಅನುಸಾರ [Worker Adjustment and Retraining Act]ಪಿಂಕ್ ಸ್ಲಿಪ್ ಕೊಡುವ 60 ದಿವಸಗಳ ಮುಂಚೆ ನೌಕರರಿಗೆ ಲಿಖಿತ ಸೂಚನೆ ನೀಡಬೇಕು. ಆದರೆ ನಿಯಮಗಳನ್ನು ಕಂಪನಿ ಉಲ್ಲಂಘಿಸಿ ನೂರು ಮಂದಿ ನೌಕರರನ್ನು ಏಕಾಏಕಿ ಮನೆಗೆ ಕಳಿಸಿದೆ ಎನ್ನುವುದು ಆಪಾದನೆ.

ಕೆಲಸ ಕಳೆದುಕೊಂಡಿರುವ ಈ ಕಂಪನಿಯ ನೌಕರರು ಜರ್ಸಿ ಸಿಟಿ ಮತ್ತು ಮ್ಯಾನ್ ಹಟ್ಟನ್ ನಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಕೆಲಸ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ದಿವಾಳಿಸ್ಥಿತಿ ಘೋಷಣೆ ಮಾಡುವ ಹೊತ್ತಿಗೆ ಕಂಪನಿಯಲ್ಲಿ 25,000 ನೌಕರರು ದುಡಿಯುತ್ತಿದ್ದರು. ಕೇವಲ ಐಟಿ ವಿಭಾಗಕ್ಕಾಗಿಯೇ ಲೆಹಮನ್ ಬ್ರದರ್ಸ್ 1.14 ಬಿಲಿಯನ್ ಡಾಲರು ಹಣ ಸುರಿದು ಲಾಸ್ ಮಾಡಿಕೊಂಡು ಕೈ ಚೆಲ್ಲಿ ಕುಳಿತ್ತಿತು. (ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+