ಫ್ರಾನ್ಸ್ ದೂತಾವಾಸ ಕಛೇರಿ ಬೆಂಗಳೂರಿನಲ್ಲಿ
ಬೆಂಗಳೂರು, ನ. 14 : ಫ್ರಾನ್ಸ್ ದೂತಾವಾಸ ಕಛೇರಿ ಬೆಂಗಳೂರಿನಲ್ಲಿ ಗುರುವಾರಿಂದ ಆರಂಭಗೊಂಡಿದೆ. ಬೆಂಗಳೂರು ಕಛೇರಿಯ ಮುಖ್ಯಸ್ಥರಾಗಿ ಡೊಮಿನಿಕ್ ಕಾಸ್ ನೇಮಕ ಗೊಂಡಿದ್ದಾರೆ. ಭಾರತ ಮತ್ತು ಫ್ರಾನ್ಸ್ ದೇಶಗಳ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ವ್ಯವಸ್ಥೆಯನ್ನು ಕಲ್ಪಸಲಾಗಿದೆ ಎಂದು ಫ್ರಾನ್ಸ್ ದೂತವಾಸ ಇಲಾಖೆಯ ಮೂಲಗಳು ತಿಳಿಸಿವೆ.
ಬೆಂಗಳೂರಿನ ವಸಂತನಗರದಲ್ಲಿ ತನ್ನ ಕಛೇರಿ ಹೊಂದಿದ್ದು, ಇನ್ನು ಮುಂದೆ ಕರ್ನಾಟಕ ಮತ್ತು ಆಂದ್ರ ಪ್ರದೇಶ ರಾಜ್ಯದ ನಾಗರಿಕರಿಗೆ ವಿಸಾ ಮತ್ತಿತರ ಅವಶ್ಯಕತೆಗಳಿಗೆ ಶೀಘ್ರದಲ್ಲಿ ಸ್ಪಂದಿಸಲಾಗುವುದು ಎಂದು ಕಚೇರಿ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications