ಉಪ್ರ.ದ ಮೀರತ್ ನಲ್ಲಿ ಭೀಕರ ಸ್ಫೋಟ, ಐವರ ಸಾವು
ಮೀರತ್, ನ. 8 : ಉತ್ತರ ಪ್ರದೇಶದ ಮೀರತ್ ನಗರದಲ್ಲಿ ಸಂಜೆ ನಾಲ್ಕರ ಸುಮಾರಿಗೆ ಭೀಕರ ಸ್ಫೋಟ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸತ್ತಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಝಾಕಿರ್ ನಗರದ ಜನನಿಬಿಡ ಲಖೀಪುರ ಬಂಗಾಲಿ ಮಾರ್ಕೆಟ್ ಬಳಿ ಕಸದ ತೊಟ್ಟಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಡೈನಮೈಟ್ ಬಳಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಸದ ತೊಟ್ಟಿಯ ಬಳಿ ಕೆಲ ಹುಡುಗರು ಚಿಂದಿ ಆಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಮಕ್ಕಳೇ ಹೆಚ್ಚಿಗೆ ಸಾವಿಗೀಡಾಗಿದ್ದಾರೆ. ತೊಟ್ಟಿಯ ಬಳಿಯೇ ಮಗುವಿನ ದೇಹ ದೊರೆತಿದ್ದು, ಛಿದ್ರವಾಗಿದೆ.
ಹಿಂದುಳಿದ ಜನರಿಂದಲೇ ಆವೃತವಾಗಿರುವ ಈ ಪ್ರದೇಶವನ್ನು ಪೊಲೀಸರು ಸ್ಥಳವನ್ನು ಆಕ್ರಮಿಸಿಕೊಂಡಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ. ಈ ಸ್ಫೋಟದಲ್ಲಿ ಉಗ್ರರ ಕೈವಾಡವಿರಲಾರದು ಎಂದು ಪೊಲೀಸರು ಹೇಳುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications