ಬಳ್ಳಾರಿ ಶಾಖೋತ್ಪನ್ನ ಘಟಕ ರಾಷ್ಟ್ರಕ್ಕೆ ಅರ್ಪಣೆ

ಬಳ್ಳಾರಿ, ನ. 3 : ಕುಡಿತಿನಿ ಬಳಿ ನಿರ್ಮಾಣಗೊಂಡಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯನ್ನು ಇಂದು ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇಂದು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ, ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಕೈಗೊಂಡಿರುವ ಶಾಖೋತ್ಪನ್ನ ಘಟಕ ಆರಂಭದ ಕಾರ್ಯ ದೂರದೃಷ್ಟಿಯ ಫಲವಾಗಿದೆ ಎಂದು ಅಡ್ವಾಣಿ ಪ್ರಶಂಸೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಗ್ರಾಮಕ್ಕೂ ನಿರಂತರವಾಗಿ ವಿದ್ಯುತ್ ನೀಡುವ ಕಾರ್ಯ ಮಾಡಿರುವ ಸರ್ಕಾರ ಅಭಿನಂದನಾರ್ಹ ಎಂದರು. ಗುಜರಾತ್ ಮಾದರಿಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರ ಉತ್ತಮ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದ ಅವರು, ಗುಜರಾತಿನಲ್ಲಿ ಇಂದು ದಿನದ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಜನಪ್ರತಿನಿಧಿಗಳಿಗೆ ದೂರದೃಷ್ಟಿ ಇದ್ದರೆ, ಇಂತಹ ಜನಪರ ಯೋಜನೆಗಳನ್ನು ನೀಡಲು ಸಾಧ್ಯ. ಆ ವಿಷಯದಲ್ಲಿ ಕರ್ನಾಟಕ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ಕುಡಿತಿನಿ ಬಳಿ ನಿರ್ಮಾಣವಾಗಿರುವ 500 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಯಿಂದ ಪ್ರತಿದಿನ ವಿದ್ಯುತ್ ಜಾಲಕ್ಕೆ 9 ದಶಲಕ್ಷ ಯೂನಿಟ್ ವಿದ್ಯುತ್ ದೊರೆಯಲಿದೆ. ಈಗ ರಾಜ್ಯಕ್ಕೆ ಪ್ರತಿದಿನ 120 ದಶಲಕ್ಷ ಯೂನಿಟ್ ಬೇಕಿದೆ. ಮೊದಲ ಘಟಕ ನಿರ್ಮಾಣಕ್ಕೆ 2100 ಕೋಟಿ ರುಪಾಯಿಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ ಈಗ 1700 ಮೆಗಾವ್ಯಾಟ್ ವಿದ್ಯುತ್ ನ ಕೊರತೆ ಇದೆ. ಇಂದು ಆರಂಭವಾಗಿರುವ ಘಟಕದಿಂದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ನೆಮ್ಮದಿ ತಂದಿದ್ದರೂ ಈ ಘಟಕದಿಂದ ಪ್ರತಿ ಯೂನಿಟ್ ಗೆ ಸರಾಸರಿ 2 ರುಪಾಯಿ ವೆಚ್ಚದಲ್ಲಿ ವಿದ್ಯುತ್ ಲಭಿಸಲಿದೆ. ರಾಜ್ಯದಲ್ಲಿ ಇದುವರೆಗೆ 210 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ರಾಯಚೂರಿನಲ್ಲಿ ಸ್ಫಾಪಿಸಲಾಗಿತ್ತು. ಅಲ್ಲಿ 7 ಘಟಕಗಳಿವೆ. 8ನೇ ಘಟಕ ಸಿದ್ಧಗೊಳ್ಳತೊಡಗಿದೆ.

ಬಳ್ಳಾರಿ ಘಟಕದಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ಹೆಚ್ಚಿಸಿದೆ. ಇಂಜನಿಯರಿಂಗ್ ಪದವೀಧರರಿಗೆ ಖಾಯಂ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಮೊದಲ ಘಟಕದ ಕಾಮಗಾರಿ 2003ರ ಡಿಸೆಂಬರ್ ನಲ್ಲಿ ಆರಂಭವಾಯಿತು. 36 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಯೋಜನೆಗೆ ಚಿಂತನೆ ನಡೆಯಿತು. ಕುಮಾರಸ್ವಾಮಿ ಕಾಲದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇತ್ತು. ಆದರೆ ರಾಜಕೀಯ ಏರಿಳಿತದಿಂದ ಮತ್ತೆ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿತು. ರಾಜ್ಯಪಾಲರ ಆಡಳಿತಾವಧಿಯಲ್ಲಿ ಕಾಮಗಾರಿ ನಿಧಾನವಾಗಿ ನಡೆಯಿತು. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಈ ಮಹತ್ವದ ಯೋಜನೆ ಪೂರೈಸುವ ಅವಕಾಶ ಲಭಿಸಿತು.

(ದಟ್ಸ್ ಕನ್ನಡ ವಾರ್ತೆ)

ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಶುರು : ಈಶ್ವರಪ್ಪ
ಸೆ.8ರಂದು ಛತ್ತೀಸ್ ಗಡದ ವಿದ್ಯುತ್ ಗೆ ಚಾಲನೆ
ಕರ್ನಾಟಕದಿ ಹರಿಯಲಿದೆ ಛತ್ತೀಸ್ ಗಢದ ವಿದ್ಯುತ್
ರೈತರಿಗೆ ಉಚಿತ ವಿದ್ಯುತ್‌ಗೆ ಬಜೆಟ್‌ನಲ್ಲಿ ಪರಿಹಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+