ಭಾರತದ ಐವರಿಗೆ ರೋಡ್ಸ್ ಸ್ಕಾಲರ್ ಪಿಷ್

ನವದೆಹಲಿ, ನ. 3 : ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಮೆರಿಕದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ನೀಡುವ 2009ರ ಸಾಲಿನ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ ಷಿಪ್ ನ್ನು ಭಾರತದ ಐದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಈ ಐದು ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳಿರುವುದು ಹೆಮ್ಮೆಯ ಸಂಗತಿಯಾಗಿದೆ.

ರೋಡ್ಸ್ ಸ್ಕಾಲರ್ ಷಿಪ್ ನ ಭಾರತದ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಇನ್ ಫೊಸೀಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ನೇತೃತ್ವದ ಆಯ್ಕೆ ಸಮಿತಿ ಇಂದು ಕೊನೆಯ ಸುತ್ತಿನ ಸಂದರ್ಶನದ ನಂತರ 2009ರ ಸಾಲಿನ ರೋಡ್ಸ್ ಸ್ಕಾಲರ್ ಷಿಪ್ ಗೆ ಚಿನ್ಮಯ ಕುಮಾರ್ (ದೆಹಲಿ ವಿಶ್ವವಿದ್ಯಾಲಯದ ಕಿರೋರಿಮಲ್ ಕಾಲೇಜ್), ರಾಕೇಶ್ ಶರ್ಮಾ(ಸೇಂಟ್ ಜಾನ್ ಮೆಡಿಕಲ್ ಕಾಲೇಜ್, ಬೆಂಗಳೂರು), ದ್ವಾನಿ ಮೆಹತಾ (ಸರ್ಕಾರಿ ಕಾನೂನು ಕಾಲೇಜ್, ಮುಂಬೈ), ಕೃತಿಕಾ ಭಟ್ಟಾಚಾರ್ಯ(ಸೇಂಟ್ ಸ್ಟೀಫನ್ ಕಾಲೇಜ್, ದೆಹಲಿ), ಸುಶೀಲ್ ರಾವ್ (ಎನ್ಐಎಸ್ಐಯು, ಬೆಂಗಳೂರು) ಅವರ ಹೆಸರುಗಳನ್ನು ಪ್ರಕಟಿಸಿದೆ.

ರೋಡ್ಸ್ ಸ್ಕಾಲರ್ ಷಿಪ್ ನ ಭಾರತೀಯ ಆಯ್ಕೆ ಸಮಿತಿ ಕಾರ್ಯದರ್ಶಿ ಪ್ರೊ.ವಿ.ಎಸ್.ಚೌಹಾನ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆ ಯ ಕ್ರಮ ಪಾರದರ್ಶಕವಾಗಿದ್ದು, ಪ್ರತಿಭೆ ಹಾಗೂ ಅರ್ಹತೆಯನ್ನು ಮಾನದಂಡವಾಗಿರಿಸಿಕೊಂಡು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು. ರೋಡ್ಸ್ ಸ್ಕಾಲರ್ ಷಿಪ್ ನಲ್ಲಿ ವಿದ್ಯಾಭ್ಯಾಸ ಮಾಡಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಇಂದು ತಮ್ಮ ಕ್ಷೇತ್ರದಲ್ಲಿ ಉತ್ತುಂಗದ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಕಾರಣಕ್ಕಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ನೀಡುವ ಸ್ನಾತಕೋತ್ತರ ಪದವಿಯ ಸ್ಕಾಲರ್ ಷಿಪ್ ಗೆ ಭಾರಿ ಪ್ರಾಮುಖ್ಯತೆ ಇದೆ ಎಂದು ಹೇಳಿದರು.

ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಮಾಜಿ ಸೆನೆಟರ್ ಲಾರಿ ಪ್ರೆಸ್ ಲರ್, ಪ್ರಸ್ತುತ ಭಾರತದ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಹಾಗೂ ಕನ್ನಡ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ರೋಡ್ಸ್ ಸ್ಕಾಲರ್ ಷಿಪ್ ಪಡೆದು ವಿದ್ಯಾಭ್ಯಾಸ ಮಾಡಿರುವವರಲ್ಲಿ ಪ್ರಮುಖರಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+