ಭೀಕರ ಸರಣಿ ಬಾಂಬ್ ಸ್ಫೋಟಕ್ಕೆ ಆಸ್ಸಾಂ ತತ್ತರ
ಗೌಹಾತಿ, ಅ. 30 : ಇಂದು ಮಧ್ಯಾಹ್ನ ಆಸ್ಸಾಂನ ಗೌಹಾತಿಯಲ್ಲಿ ಐದು ಕಡೆ ಮತ್ತು ಉತ್ತರ ಆಸ್ಸಾಂನಲ್ಲಿ ಮೂರು ಕಡೆ ಸೇರಿದಂತೆ 11 ಕಡೆ ಪ್ರಬಲ್ ಬಾಂಬ್ ಸ್ಫೋಟಗಳು ಸಂಭವಿಸಿದ್ದು ಪ್ರಥಮ ಮಾಹಿತಿ ಬಂದಾಗ ಹತ್ತು ಜನ ಹತ್ಯೆಗೀಡಾಗಿದ್ದಾರೆ ಮತ್ತು 50 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಗೊಳಿಸಲಾಗಿದೆ ಎಂದು ಶಂಕಿಸಲಾಗಿದೆ. ಗೌಹಾತಿಯಲ್ಲಿ ಬಾಂಬ್ ಸ್ಫೋಟಗೊಂಡ ಪ್ರದೇಶ ಸಂಪೂರ್ಣ ಹೊತ್ತಿ ಉರಿಯುತ್ತಿದೆ. ಸ್ಫೋಟದ ಪ್ರಮಾಣ ಎಷ್ಟಿತ್ತೆಂದರೆ ಸುತ್ತಲಿನ ವಾಹನಗಳೆಲ್ಲ ಸುಟ್ಟು ಕರಕಲಾಗಿವೆ. ಸ್ಫೋಟಗಳಲ್ಲಿ ಸಾವಿನ ಪ್ರಮಾಣ ಎಷ್ಟಿದೆಯೆಂದು ತಿಳಿದುಬಂದಿಲ್ಲ. ನಾಲ್ವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಸರಿ ಸುಮಾರು 11 ರಿಂದ 11.30ರ ಹೊತ್ತಿಗೆ ಸ್ಫೋಟ ಸಂಭವಿಸಿದೆ. ನಗರದ ಗಣೇಶ ಗುಡಿ, ದಿಸ್ಪುರ್ ರಸ್ತೆ, ಪಾನ್ ಬಜಾರ್ ಹಾಗೂ ಜಿಲ್ಲಾ ರಸ್ತೆಯಲ್ಲಿ ಸ್ಫೋಟ ಘಟನೆ ಸಂಭವಿಸಿದೆ. ಇಡೀ ಪ್ರದೇಶ ಹೊಗೆಯಿಂದ ಆವೃತವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಾರ್ಯಚರಣೆಗೆ ತೊಂದರೆಯಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಚರಣೆ ಮುಂದಾಗಿದ್ದಾರೆ. ಬಾಂಬ್ ನಿಷ್ಕಿಯ ದಳ ಘಟನಾ ಸ್ಥಳಕ್ಕೆ ಆಗಮಿಸಿ ಶೋಧನಾ ಕಾರ್ಯ ನಡೆಸಿದ್ದಾರೆ. ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಯಾವ ಸಂಘಟನೆಗಳು ಹೊಣೆ ಹೊತ್ತಿಕೊಂಡಿಲ್ಲ. ಹುಜಿ ಅಥವಾ ಉಲ್ಫಾ ಸಂಘಟನೆಗಳ ಕೈವಾಡವಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications