ಕೊಡಗಿನ ಸೈನಿಕ ಶಾಲೆ ಸೇರಲು ಅವಕಾಶ

ಕುಶಾಲನಗರ, ಅ. 23: ಕೊಡಗು ಸೈನಿಕ ಶಾಲೆಯ 2009-10ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲುಅರ್ಜಿ ಆಹ್ವಾನಿಸಲಾಗಿದೆ.2ನೇ ಜುಲೈ 1998 ರಿಂದ 1ನೇ ಜುಲೈ 1999ರ ಒಳಗೆ ಜನಿಸಿರುವ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವರು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರವೇಶ ಪರೀಕ್ಷೆಯು 4.1.2009ರಂದು ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ಹಾಗೂ ಕುಶಾಲನಗರಗಳಲ್ಲಿ ನಡೆಯುವುದು. ಅರ್ಜಿ ಹಾಗೂ 2 ವರ್ಷದ ಹಿಂದಿನ ಪ್ರಶ್ನೆ ಪತ್ರಿಕೆಗಳು ಹಾಗೂ ವಿವರ ಪತ್ರಗಳನ್ನು ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು, ಕೂಡಿಗೆ ಅಂಚೆ, ಕೊಡಗು ಜಿಲ್ಲೆ , ಕರ್ನಾಟಕ - 571232 ಇವರಿಂದ ಪಡೆಯಬಹುದಾಗಿದೆ.

ಸಾಮಾನ್ಯ ರಕ್ಷಣಾ ವಿಭಾಗದವರು ರೂ.350 ಹಾಗೂ ಎಸ್‌ಸಿ ಮತ್ತು ಎಸ್‌ಟಿ ವಿಭಾಗದವರು ರು.250ರ ಡಿಡಿ.ಯನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕುಶಾಲನಗರ ಶಾಖೆ (ಕರ್ನಾಟಕ) ಇಲ್ಲಿಗೆ ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು ಹೆಸರಿಗೆ ಪಡೆದು 9" x7" ಅಳತೆ ಸ್ವವಿಳಾಸ ಹೊಂದಿರುವ ರು.25 ಮೌಲ್ಯದ ಸ್ಟ್ಯಾಂಪ್ ಅಂಟಿಸಿ ಕವರಿನೊಂದಿಗೆ ಕಳುಹಿಸಬೇಕು. ಅರ್ಜಿ ಮತ್ತು ವಿವರ ಪತ್ರಗಳು ಸದರಿ ಕಚೇರಿಯಲ್ಲಿ ಲಭ್ಯವಿರುತ್ತದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ದಿನಾಂಕ 10.12.08 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು ಅಥವಾ ದೂರವಾಣಿ ಸಂಖ್ಯೆ 08276-278961ನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

(ದಟ್ಸ್ ಕನ್ನಡವಾರ್ತೆ)

ತೀರ್ಥೋದ್ಭವ ವೀಕ್ಷಿಸಿದ ಅಪಾರ ಭಕ್ತರು
ದಸರಾ ಪ್ರಯುಕ್ತ ಮಡೀಕೇರಿಗೆ ನಿರಂತರ ವಿದ್ಯುತ್
ಮಡಿಕೇರಿ ಮೇಲೆ ಕವಿದ ಭೂಕಬಳಿಕೆಯ ಮಂಜು
ಕೈಬೀಸಿ ಕರೆಯುತಿದೆ ಕೊಡಗು ಪ್ರವಾಸೋದ್ಯಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+