ಮಗು ತಪ್ಪಿಸಿಕೊಂಡಿದೆ,ನೀವು ಕಂಡರೆ ತಿಳಿಸಿ

missing child bhoomikaಎರಡು ವರ್ಷದ ಮಗು ಬೆಂಗಳೂರಿನಲ್ಲಿ ತಪ್ಪಿಸಿಕೊಂಡಿದೆ. ಕಂಡರೆ ತಿಳಿಸಿ. ಅಕ್ಟೋಬರ್ 2 ತಾರೀಕು ತಮ್ಮ ಮಗಳು ಭೂಮಿಕಾ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಜನಜಂಗುಳಿಯಲ್ಲಿ ಕಾಣೆಯಾಗಿದ್ದಾಳೆ. ಸುಳಿವು ಸಿಕ್ಕವರು ತಮಗೆ ತಿಳಿಸಬೇಕೆಂದು ಹುಳಿಮಾವು ನಿವಾಸಿಗಳಾದ ಮಗುವಿನ ತಂದೆ ಶ್ರೀನಿವಾಸ್ ಮತ್ತು ತಾಯಿ ಗಿರಿಜಾ ಕೇಳಿಕೊಂಡಿದ್ದಾರೆ.

ಮಾಮ, ಪಪ್ಪಾ, ಜಿಯಾ, ಮಿ ಮುಂತಾದ ನಾಕಾರು ತೊದಲು ಮಾತುಗಳನ್ನು ಮಾತ್ರ ಮಗು ಆಡುತ್ತದೆ. ಭೂಮಿಕಾಗೆ ಇನ್ನೂ ಎರಡು ವರ್ಷ ಕೂಡ ತುಂಬಿಲ್ಲ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಮಗುವಿನ ಬಂಧು ಬಳಗದವರು ಕಳೆದುಹೋದ ಕಂದಮ್ಮನನ್ನು ಹುಡುಕಿಕೊಂಡು ಇಡೀ ಬೆಂಗಳೂರು ಅಲೆಯುತ್ತಿದ್ದಾರೆ. ಆಕಸ್ಮಾತ್ ನಿಮ್ಮ ಕಣ್ಣಿಗೇನಾದರೂ ಬಿದ್ದರೆ ಕೂಡಲೇ ತಿಳಿಸಿ.

ಸಂಪರ್ಕ ವಿಳಾಸ : ಮಗುವಿನ ದೊಡ್ಡಪ್ಪ, ಜಯರಾಮ, ನಿಮ್ಹಾನ್ಸ್ ಸಮೀಪದ ಸೋಮೇಶ್ವರ ನಗರ. ದೂರವಾಣಿ +91-99029 33247

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+