ಕ್ಯಾಂಪಸ್ ನೇಮಕಾತಿ ನಿಲ್ಲಿಸಿಲ್ಲ : ವಿಪ್ರೊ ಸಂಸ್ಥೆ

ಬೆಂಗಳೂರು, ಅ.22: ಜಾಗತಿಕ ಆರ್ಥಿಕ ಬಿಕ್ಕಟ್ಟ್ಟಿನಿಂದ ಕ್ಯಾಂಪಸ್ ನೇಮಕಾತಿಗಳನ್ನು ನಿಲ್ಲಿಸಿಲ್ಲ ಎಂದು ದೇಶದ ಪ್ರಮುಖ ಐಟಿ ಕಂಪನಿ ವಿಪ್ರೋ ಟೆಕ್ನಾಲಜೀಸ್ ನ ನಿರ್ದೇಶಕ (ಮಾನವ ಸಂಪನ್ಮೂಲ) ಪ್ರತೀಕ್ ಕುಮಾರ್ ಬುಧವಾರ ತಿಳಿಸಿದರು.

ವಿಪ್ರೊ ಇಂದು 2ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನೇಮಕಾತಿ ಹಾಗೂ ಕ್ಯಾಂಪಸ್ ಆಯ್ಕೆಗಳನ್ನು ನಿಲ್ಲಿಸಿಲ್ಲ, ಈ ಪ್ರಕ್ರಿಯೆ ಎಂದಿನಂತೆ ಮುಂದುವರಿಯುತ್ತಿದೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಪ್ರತೀಕ್, ಈಗಾಗಲೇ ಪತ್ರ ಕಳುಹಿಸಿದಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ನೇಮಕಾತಿ ಪತ್ರಗಳನ್ನು ಕಂಪನಿ ತಿರಸ್ಕರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬೇಡಿಕೆಗೆ ತಕ್ಕಂತೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷದಲ್ಲಿ 8000 ಕ್ಯಾಂಪಸ್ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಹಾಗೆಯೇ 13,000 ಮಂದಿಗೆ ನೇಮಕಾತಿ ಪತ್ರಗಳನ್ನು ನೀಡಿದ್ದೇವೆ. ತರಬೇತಿಗೂ ಮುಂಚೆ ಅವರು ತಮ್ಮ ಕೆಲಸವನ್ನು ಏನು ಎಂಬುದನ್ನು ತಿಳಿದುಕೊಳ್ಳಲು ಅನುವಾಗುವಂತೆ ಸಲಕರಣಾ ಕಿಟ್ ಗಳನ್ನು ಕೊಟ್ಟಿದ್ದೇವೆ. ಹೊಸಬರ ಆಯ್ಕೆ ಪ್ರಕ್ರಿಯೆ ನಾಲ್ಕನೆ ತ್ರೈಮಾಸಿಕದವರೆಗೂ ಮುಂದುವರಿಯುತ್ತದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಪ್ರತೀಕ್ ಕುಮಾರ್ ವಿವರ ನೀಡಿದರು.

(ಯುಎನ್ ಐ)

ಜಾಗತಿಕ ಐಟಿ ಕ್ಷೇತ್ರದಲ್ಲಿ 'ಪಿಂಕ್ ಸ್ಲಿಪ್ ಮೇಳ'
ಒಂದು ಸಾವಿರ ನೌಕರರಿಗೆ ಗೇಟ್ ಪಾಸ್ ಕೊಟ್ಟ ವಿಪ್ರೊ
ಟ್ರಾಫಿಕ್ ಸಮಸ್ಯೆ : ಚೆನ್ನೈನಿಂದ ಐಟಿ ಕಂಪೆನಿಗಳ ಗುಳೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+