ದೇವನಹಳ್ಳಿಗೆ ಟಾಟಾ ಮಾರ್ಕೊಪೋಲೊ ಬಸ್
ಬೆಂಗಳೂರು, ಅ.20: ನವೆಂಬರ್ 1 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ಟಾಟಾ ಮಾರ್ಕೊಪೋಲೊ ಬಸ್ ಗಳ ಸೇವೆಯನ್ನು ಆರಂಭಿಸುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ಇಂದು ತಿಳಿಸಿದ್ದಾರೆ.
ಸಾರಿಗೆ ಸಚಿವರ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯ ಉತ್ತಮ ಬಸ್ ಸೇವೆಯನ್ನು ಒದಗಿಸಲಾಗಿದೆ. ನ.1ರಿಂದ ಮಾರ್ಕೊಪೊಲೋ ಬಸ್ ಗಳ ಪ್ರಾಯೋಜಿತ ಸೇವೆ ಆರಂಭಿಸಲಾಗುತ್ತದೆ. ಮಾರ್ಕೊಪೋಲೊ ಬಸ್ ಸೇವೆ ಪ್ರಯಾಣಿಕರಿಗೆ ಇಷ್ಟವಾದರೆ ನಗರದ ಎಲ್ಲೆಡೆ ವಿಸ್ತರಿಸಲಾಗುತ್ತದೆ. ಶೀಘ್ರದಲ್ಲಿ 3500 ಹೊಸ ಬಸ್ ಗಳನ್ನು ಖರೀದಿಸಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ನಗರದ ಸುತ್ತಮುತ್ತ 10 ಬಸ್ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಹಾಗೆಯೇ ಮೈಸೂರಿನಲ್ಲಿ ರು.108 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ವಿವರ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಧಾರವಾಡಕ್ಕೆ ಟಾಟಾ ಮಾರ್ಕೋಪೊಲೋ ಬಸ್
ರಾಜ್ಯಕ್ಕೆ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ಅಜಂತಾ ಕಾರು
ಮೋದಿಗೆ ಒಲಿದ ಟಾಟಾ ನ್ಯಾನೋ ಘಟಕ












Click it and Unblock the Notifications