ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಗಡಿಯಿಂದ ಕೆಳಗಿಳಿದ ಸೂಚ್ಯಂಕ

By Staff
|
Google Oneindia Kannada News

ಮುಂಬೈ, ಅ. 17 : ಪ್ರಮುಖ ಹೂಡಿಕೆದಾರರ ಷೇರು ದರಗಳು ನಿರಂತರವಾಗಿ ಇಳಿಮುಖವಾದ ಕಾರಣ ಗೂಳಿಯ ಓಟಕ್ಕೆ ಕಡಿವಾಣಿ ಬಿದ್ದಿದ್ದು, ಎರಡು ವರ್ಷಗಳಲ್ಲಿ ಷೇರುಪೇಟೆ ಸೂಚ್ಯಂಕ ಮೊದಲ ಬಾರಿಗೆ 10 ಸಾವಿರ ಗಡಿಗಿಂತ ಕೆಳಗೆ ಇಳಿದಿದೆ.

ದಿನದ ಆರಂಭದಲ್ಲಿ 205 ಪಾಯಿಂಟ್ ಗಳಿಕೆ ಕಂಡರೂ ಕೊನೆಯಲ್ಲಿ 582 ಪಾಯಿಂಟ್ ಇಳಿಮುಖವಾಗಿ 9998ಕ್ಕೆ ಬಂದು ನಿಂತಿದೆ. ಜೂನ್ 2006ರಲ್ಲಿ ಸೂಚ್ಯಂಕ 10 ಸಾವಿರಕ್ಕಿಂತ ಕೆಳಗಿತ್ತು. ಎನ್ಎಸ್ಇ ಸೂಚ್ಯಂಕ ನಿಫ್ಟಿ ಕೂಡ ಶೇ. 6ರಷ್ಟು ಅಂಕ ಕಳೆದುಕೊಂಡು 3072 ಅಂಕಕ್ಕೆ ಬಂದು ನಿಂತಿದೆ.

ಷೇರುಪೇಟೆಯ ಎಡಬಿಡಂಗಿ ಸ್ಥಿತಿಯಿಂದಾಗಿ ಷೇರುಗಳ ಕೊಳ್ಳುವಿಕೆಗಿಂತ ಮಾರಾಟದ್ದೇ ಭರಾಟೆ ಜಾಸ್ತಿಯಿತ್ತು. ತಂತ್ರಜ್ಞಾನ, ಕ್ಯಾಪಿಟಲ್ ಗೂಡ್ಸ್, ತೈಲ ಉದ್ಯಮಗಳಲ್ಲಿ ಷೇರು ಕೊಳ್ಳುವಿಕೆ ಕಂಡುಬಂದರೆ, ಬ್ಯಾಂಕಿಂಗ್, ಫಾರ್ಮಾ ಕ್ಷೇತ್ರಗಳಲ್ಲಿ ಅಧಿಕ ಮಾರಾಟ ಕಂಡುಬಂದಿದೆ. ಐಸಿಐಸಿಐ, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಕಮ್ಯುನಿಕೇಷನ್, ಸ್ಟರ್ಲೈಟ್ ಇಂಡಸ್ಟ್ರೀಸ್, ರಿಲಾಯನ್ಸ್ ಕಮ್ಯುನಿಕೇಷನ್ಸ್, ಡಿಎಲ್ಎಫ್ ಸಂಸ್ಥೆಗಳು ನಷ್ಟ ಅನುಭವಿಸಿವೆ. ವಿಪ್ರೋ, ಓಎನ್ಜಿಸಿ, ಎಲ್ ಎನ್ ಟಿ, ಎಚ್ ಸಿ ಎಲ್, ಟಿಸಿಎಸ್, ಐಟಿಸಿ ಷೇರು ದರಗಳಲ್ಲಿ ಏರಿಕೆ ಕಂಡುಬಂದಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X