ದೇಶದ ಪ್ರಪ್ರಥಮ ವಜ್ರ ಮಾರಾಟ ಪೋರ್ಟಲ್
ಬೆಂಗಳೂರು, ಅ.14: ಅಂತರ್ಜಾಲದಲ್ಲಿ ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳು ಚಿತ್ರಕಲೆ ಸಹ ಮಾರಾಟಕ್ಕಿದ್ದರೆ ಆಭರಣಗಳು ಯಾಕಾಗಬಾರದು? ಅದರಲ್ಲೂ ಮುಖ್ಯವಾಗಿ ಬೆಲೆಬಾಳುವ ವಜ್ರಗಳ ಮಾರಾಟ?
ಅಂತರ್ಜಾಲದಲ್ಲಿನ ಈ ಒಂದು ಕೊರತೆಯನ್ನು ಕ್ಯಾರಟ್ ಲೇನ್ ಎಂಬ ಅಂತರ್ಜಾಲ ತಾಣ ಪೂರೈಸಲಿದೆ. ಭಾರತದ ಪ್ರಪ್ರಥಮ ಆಭರಣ ಹಾಗೂ ವಜ್ರಗಳ ಪೋರ್ಟಲ್ ಮಂಗಳವಾರ ಪ್ರಾರಂಭವಾಯಿತು. ಈ ಪೋರ್ಟಲ್ ಮೂಲಕ ಮಾರಾಟ ಮಾಡುವ ಆಭರಣ ಹಾಗೂ ವಜ್ರಗಳು ಅತ್ಯುತ್ತಮ ಪ್ರಯೋಗಶಾಲೆಗಳ ಹಾಗೂ ಹಾಲ್ ಮಾರ್ಕ್ ನ ಪ್ರಮಾಣವನ್ನು ಹೊಂದಿವೆ. ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಜಿಐಎ, ಎಜಿಎಸ್ ಹಾಗೂ ಎಚ್ ಆರ್ ಡಿ ಮಾನ್ಯತೆಯನ್ನು ಇಲ್ಲಿನ ಆಭರಣಗಳು ಪಡೆದಿವೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರು ತಮಗಿಷ್ಟವಾದ ಆಭರಣಗಳ ವಿನ್ಯಾಸ, ಗಾತ್ರ ಹಾಗೂ ತಾವೇ ವಿನ್ಯಾಸಗೊಳಿಸಿದ ಆಭರಣಗಳನ್ನು ಕೊಳ್ಳಲು ಈ ತಾಣದ ಮೂಲಕ ಬೇಡಿಕೆ ಸಲ್ಲಿಸಬಹುದು. ಇಲ್ಲಿ ರು.4,000ದಿಂದ ರು.2 ಲಕ್ಷದವರೆಗೂ ಬೆಲೆ ಬಾಳುವ ಆಭರಣಗಳು ಲಭ್ಯವಾಗಲಿವೆ. ಈ ತಾಣದ ಮತ್ತೊಂದು ವಿಶೇಷತೆ ಎಂದರೆ, ನಿಗದಿತ ಸಮಯದಲ್ಲಿ ಆಭರಣಗಳನ್ನು ಹಿಂತಿರುಗಿಸಿದರೆ ಅಥವಾ ಬದಲಾಯಿಸಿಕೊಂಡರೆ ಯಾವುದೆ ಶುಲ್ಕವನ್ನು ವಿಧಿಸುವುದಿಲ್ಲ.
(ದಟ್ಸ್ ಕನ್ನಡ ವಾರ್ತೆ)
ಆನ್ ಲೈನ್ ನಲ್ಲಿ ಆಭರಣ ಖರೀದಿಸಿ












Click it and Unblock the Notifications