ಎಫ್ ಎಂ ರೇಡಿಯೊಗಳಲ್ಲಿ ವಾರ್ತಾಪ್ರಸಾರಕ್ಕೆಸಮ್ಮತಿ
ನವದೆಹಲಿ, ಅ.12: ಖಾಸಗಿ ಎಫ್ ಎಂ ರೇಡಿಯೊ ವಾಹಿನಿಗಳಲ್ಲಿ 2008ರ ವರ್ಷಾಂತ್ಯಕ್ಕೆ ವಾರ್ತಾ ಪ್ರಸಾರ ಆರಂಭವಾಗಲಿದೆ. ಪ್ರಧಾನ ಮಂತ್ರಿಗಳ ಮಾಹಿತಿ, ಸಂಪರ್ಕ ಮತ್ತು ಮನೋರಂಜನೆ ಸಮಿತಿ ಮೂರು ವರ್ಷಗಳ ನಂತರ ಈ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದೆ.
ಮೂಲಗಳ ಪ್ರಕಾರ ಆಕಾಶವಾಣಿ, ದೂರದರ್ಶನ ಹಾಗೂ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಂದ ಮಾತ್ರ ಖಾಸಗಿ ಎಫ್ ಎಂ ವಾಹಿನಿಗಳು ಸುದ್ದಿ ಪಡೆಯತಕ್ಕದ್ದು ಎಂಬ ಷರತ್ತು ವಿಧಿಸಲಾಗಿದೆ. ಹಾಗೆಯೇ ಸಂಗೀತ ಹಾಗೂ ಮನರಂಜನೆಗೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ಬಿತ್ತ್ತರಿಸಬೇಕೆಂದೂ ಸೂಚಿಸಲಾಗಿದೆ.
ಈಗಾಗಲೇ ವಾರ್ತಾ ಸಚಿವಾಲಯ 250 ಖಾಸಗಿ ಎಫ್ ಎಂಗಳ ಸುದ್ದಿ ಪ್ರಸಾರಕ್ಕೆ ಅನುಮತಿ ನೀಡಿದೆ. ಆದರೆ ಸಚಿವ ಸಂಪುಟದ ನಿರ್ಧಾರ ಅಂತಿಮವಾಗಿರುವ ಕಾರಣ ಚಾನೆಲ್ ಗಳು ಇನ್ನೂ 1 ತಿಂಗಳು ಕಾಯಬೇಕಿದೆ. ಕೆಲವು ನಿಬಂಧನೆಗಳ ಅನ್ವಯ ಖಾಸಗಿ ಎಫ್ ಎಂ ವಾಹಿನಿಗಳ ಸುದ್ದಿ ಪ್ರಸಾರಕ್ಕೆ ಭಾರತ ದೂರವಾಣಿ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶಿಫಾರಸು ಮಾಡಿತ್ತು. ಟ್ರಾಯ್ ನ ಶಿಫಾರಸನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಖಾಸಗಿ ಎಫ್ ಎಂ ವಾಹಿನಿಗಳಲ್ಲಿ ಸುದ್ದಿ ಪ್ರಸಾರಕ್ಕೆ ಅನುಮತಿ ನೀಡುತ್ತಿದೆ.
(ಏಜೆನ್ಸೀಸ್)












Click it and Unblock the Notifications