ಸಿಸ್ಟರ್ ಆಲ್ಫೋನ್ಸಾಅವರಿಗೆ ಕೇಂದ್ರದ ನಾಣ್ಯ ನಮನ
ನವದೆಹಲಿ, ಅ.12: ಕೇರಳ ಮೂಲದ ಭಾರತದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಆಲ್ಫ್ಫೋನ್ಸಾ ಅವರಿಗೆ ವ್ಯಾಟಿಕನ್ ನಗರದಲ್ಲಿ ಸಂತ ಪದವಿಯನ್ನು 16ನೇ ಪೋಪ್ ಬೆನೆಡಿಕ್ಟ್ ಭಾನುವಾರ ಪ್ರದಾನ ಮಾಡಲಿದ್ದಾರೆ. ಇದರ ಪ್ರಯುಕ್ತ ಭಾರತ ಸರ್ಕಾರ ಅಲ್ಫೋನ್ಸಾ ಚಿತ್ರವುಳ್ಳ ನಾಣ್ಯವನ್ನು ಬಿಡುಗಡೆ ಮಾಡಲಿದೆ ಎಂದು ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಶನಿವಾರ ತಿಳಿಸಿದ್ದಾರೆ.
ಸಿಸ್ಟರ್ ಆಲ್ಫೋನ್ಸಾ ಅವರ ಜನ್ಮ ಶತಮಾನೋತ್ಸವದ ವರ್ಷಾಚರಣೆಯ ಆರಂಭದ ದಿನ ಆಗಸ್ಟ್ 19, 2009ರಂದು ಈ ನಾಣ್ಯ ಬಿಡುಗಡೆಯಾಗಲಿದೆ. 1910ರಲ್ಲಿ ಜನಿಸಿದ ಆಲ್ಫೋನ್ಸಾ ಅವರು 60 ವರ್ಷಗಳಷ್ಟು ಹಿಂದೆಯೇ ನಿಧನರಾಗಿದ್ದಾರೆ. ಸಿಸ್ಟರ್ ಆಲ್ಫೋನ್ಸಾ ಕೇರಳದ ಕುಡಮಲೂರು ಗ್ರಾಮದ ಕಡುಬಡತನದ ಕುಟುಂಬದಲ್ಲಿ ಜನಿಸಿದ್ದರು.
ಸಿಸ್ಟರ್ ಆಲ್ಪೋನ್ಸಾ ಹಾಲ್ ಆಫ್ ಫೇಮ್ ಹಾಗೂ ಕ್ಯಾಥೋಲಿಕ್ ಚರ್ಚ್ ನ ಪೂಜ್ಯ ಸ್ಥಾನ ಪಡೆಯುತ್ತಿರುವ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆಯುವ ಈ ವಿಶೇಷ ಪ್ರಾರ್ಥನಾ ಸಮಾರಂಭ ಭಾರತೀಯ ಕಾಲಮಾನ 12.30ಕ್ಕೆ ಆರಂಭವಾಗಲಿದೆ.
(ಏಜೆನ್ಸೀಸ್)












Click it and Unblock the Notifications