ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಪಾಟೀಲ್ ಅವರಿಗೆ ಇ ಮೇಲ್ ಬೆದರಿಕೆ

By Staff
|
Google Oneindia Kannada News

ನವದೆಹಲಿ, ಅ.12: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಇ-ಮೇಲ್ ಬೆದರಿಕೆ ಪತ್ರವೊಂದು ಬಂದಿದೆ. ಈಗಾಗಲೆ ರಾಷ್ಟ್ರಪತಿಗಳು ಪುಣೆ ಭೇಟಿಯಲ್ಲಿದ್ದ್ದು ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಇ-ಮೇಲ್ ಬೆದರಿಕೆ ಪತ್ರ ಬಂದಿರುವುದು ಆತಂಕಕ್ಕೆ ಎಡೆಮಾಡಿದೆ.

ಅಪರಿಚಿತ ವ್ಯಕ್ತಿಯಿಂದ ಬಂದಿರುವ ಇ-ಮೇಲ್ ಬೆದರಿಕೆ ಪತ್ರದಲ್ಲಿ ''ಯಾವುದೇ ರೂಪದಲ್ಲಾದರೂ ದಾಳಿ ಸಂಭವಿಸಬಹುದು'' ಎಂದು ಎಚ್ಚರಿಸಲಾಗಿದೆ. ನಾಲ್ಕು ದಿನಗಳ ಭೇಟಿಗಾಗಿ ಪ್ರತಿಭಾ ಪಾಟೀಲ್ ಪುಣೆಗೆ ಶುಕ್ರವಾರವೇ ಆಗಮಿಸಿದ್ದರು. ಭಾನುವಾರ ಸಂಜೆ ಅವರು ಕಾಮನ್ ವೆಲ್ತ್ ಯುವ ಕ್ರೀಡೆಗಳನ್ನು ಉದ್ಘಾಟಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದಿರುವ ಇ-ಮೇಲ್ ಬೆದರಿಕೆ ಭದ್ರತಾ ಸಿಬ್ಬಂದಿಯ ನಿದ್ದೆ ಕೆಡಿಸಿದೆ.

ಇ-ಮೇಲ್ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಇದರಲ್ಲಿ ಉಗ್ರರ ಕೈವಾಡ ಇದೆಯೆ ಎಂಬುದರ ಬಗ್ಗೆಯೂ ಗೊತ್ತಾಗಿಲ್ಲ. ಬೆದರಿಕೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

(ಏಜೆನ್ಸೆಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X