ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ಸಾಂಗ್ಲಿಯಾನ ಸದಸ್ಯತ್ವ ರದ್ದು

By Staff
|
Google Oneindia Kannada News

ನವದೆಹಲಿ, ಅ. 8 : ಎಚ್.ಟಿ.ಸಾಂಗ್ಲಿಯಾನ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ ಆದೇಶ ಹೊರಡಿಸಿದ್ದಾರೆ.

ಜುಲೈ. 23 ರಂದು ಯುಪಿಎ ಸರ್ಕಾರ ಮಂಡಿಸಿದ್ದ ವಿಶ್ವಾಸಮತದ ಸಂದರ್ಭ ಬಿಜೆಪಿಯ ವಿಪ್ ಉಲ್ಲಂಘಿಸಿ ಸಾಂಗ್ಲಿಯಾನ ಸರ್ಕಾರದ ಪರ ಮತ ಚಲಾಯಿಸಿದ್ದರು. ಯುಪಿಎ ಪರ ಮತ ಚಲಾಯಿಸಿದ ಮಂಜುನಾಥ ಕುನ್ನೂರು, ಮನೋರಮಾ ಮಧ್ವರಾಜ್ ಅವರ ಸದಸ್ಯತ್ವವೂ ರದ್ದಾಗುವ ಸಾಧ್ಯತೆಗಳಿವೆ. ಆದರೆ, ಜೆಡಿಎಸ್ ನ ಚಾಮರಾಜನಗರ ಸಂಸದ ಶಿವಣ್ಣ ಸದಸ್ಯತ್ವ ರದ್ದು ಅಪಾಯದಿಂದ ಪಾರಾಗಿದ್ದಾರೆ.

ಅಮೆರಿಕದೊಂದಿಗೆ ಮಾಡಿಕೊಳ್ಳಲಾಗಿರುವ ನಾಗರಿಕ ಪರಮಾಣು ಒಪ್ಪಂದ ಕುರಿತು ಯುಪಿಎ ಸರ್ಕಾರದಲ್ಲಿ ಬಿರುಕುಂಟಾಗಿ, ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ಹಿಂಪಡೆದುಕೊಂಡಿದ್ದವು. ಸರ್ಕಾರ ಬಹುಮತ ಕಳೆದುಕೊಂಡಿದ್ದರಿಂದ ಸಂಸತ್ತಿನಲ್ಲಿ ವಿಶ್ವಾಸಮತ ಎದುರಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆಗ ಎಲ್ಲ ಪಕ್ಷಗಳು ತಮ್ಮ ತಮ್ಮ ಪಕ್ಷಗಳಿಗೆ ವಿಪ್ ನೀಡಿದ್ದವು. ಬಿಜೆಪಿಯ ಸಾಂಗ್ಲಿಯಾನ ಯುಪಿಎ ಮತ ನೀಡಿದ್ದರು.

(ದಟ್ಸ್ ಕನ್ನಡ ವಾರ್ತೆ)
ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್‌ಪಾಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X