ಪರಮಾಣು ನಾಗರಿಕ ಒಪ್ಪಂದಕ್ಕೆ ಬುಷ್ ಸಹಿ

ವಾಷಿಂಗ್ ಟನ್, ಅ. 8 : ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಇಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರ ಅಂತಿಮ ಸಹಿ ಹಾಕುವ ನಿರೀಕ್ಷೆ ಇದೆ. ಅಮೆರಿಕ ಸಂವಿಧಾನ 123 ನಿಯಮವನ್ನು ಭಾರತ ಚಾಚು ತಪ್ಪದೆ ಪಾಲಿಸಲಿದೆ ಎನ್ನುವ ವಿಶ್ವಾಸದೊಂದಿಗೆ ಇಂದು ಒಪ್ಪಂದ ಕೊನೆಯ ಅಂಕಿತ ಬೀಳಲಿದೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.

ಉಭಯ ದೇಶಗಳ ಮಧ್ಯೆ ಕೆಲ ಆಡಳಿತಾತ್ಮಕ ಒಪ್ಪಂದಗಳು ಒಪ್ಪಿಗೆ ಸೂಚಿತವಾದ ನಂತರ ಒಪ್ಪಂದಕ್ಕೆ ಸಹಿ ದೊರೆಯಲಿದೆ. ಉಭಯ ದೇಶಗಳ ಮಧ್ಯೆ ಇರುವ ಆಡಳಿತಾತ್ಮಕ ಒಪ್ಪಂದಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ಒಟ್ಟಿನಲ್ಲಿ ಪರಮಾಣು ಒಪ್ಪಂದಕ್ಕೆ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಅಮೆರಿಕ ಸರ್ಕಾರದ ವಕ್ತಾರ ರಾಬರ್ಟ್ ವುಡ್ ಸ್ಪಷ್ಟಪಡಿಸಿದ್ದಾರೆ.

ಒಪ್ಪಂದಕ್ಕೆ ಸಹಿ ಸಲುವಾಗಿ ವೈಟ್ ಹೌಸ್ ನಲ್ಲಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ದೇಶಗಳ ಕಾನೂನು ತಜ್ಞರು, ಉನ್ನತ ಅಧಿಕಾರಿಗಳು, ಉದ್ಯಮಿದಾರರು, ರಾಯಭಾರಿಗಳು ಉಪಸ್ಥಿತರಿರುವರು. ಒಪ್ಪಂದ ಕುರಿತು ಅಮೆರಿಕ ವಿದೇಶಾಂದ ಕಾರ್ಯದರ್ಶಿ ಕಾಂಡೋಲಿಜ್ ರೈಸ್ ಇತ್ತೀಚೆಗೆ ಭಾರತಕ್ಕೆ ಭೇಟಿ ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಜತೆಗೆ 123ರ ನಿಯಮದ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಅಣು ರಾಷ್ಟ್ರವಾಗಲು ಭಾರತಕ್ಕೆ ಇನ್ನೊಂದೆ ಮೆಟ್ಟಿಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+