ಗುಲ್ಬರ್ಗಾ ಸಿಮಿ ಸಂಘಟನೆಯ ಸ್ವರ್ಗ?

ಕಲ್ಬುರ್ಗಿ, ಅ. 7 : ದೇಶದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಗುಜರಾತ್ ಹಾಗೂ ಮುಂಬೈ ಪೊಲೀಸರು ನಗರದಲ್ಲಿ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದು ಗಮನಿಸಿದರೆ ಗುಲ್ಬರ್ಗಾ ನಗರ ಉಗ್ರರ ಅಡಗುತಾಣವಾಗಿದೆ ಎನ್ನುವ ಸಂಶಯ ಕಾಡತೊಡಗುತ್ತದೆ.

ನಿಷೇಧಿತ ಸಿಮಿ ಸಂಘಟನೆಗೆ ಸೇರಿದ ಮೂವರನ್ನು ವಶಕ್ಕೆ ತೆಗೆದುಕೊಂಡಿರುವ ಸಿಒಡಿ ಪೊಲೀಸ್ ವಿಚಾರಣೆ ನಡೆಸಿದ್ದಾರೆ. ಸಿಮಿ ಸಂಘಟನೆಯ ಸ್ವರ್ಗ ಎನಿಸಿರುವ ಗುಲ್ಬರ್ಗಾದಲ್ಲಿ ಉಗ್ರ ಸಂಘಟನೆಯೊಂದಿಗೆ ಸ್ಥಳೀಯರು ನಂಟು ಹೊಂದಿರುವುದು ಸಾಬೀತಾಗಿದೆ. ದೆಹಲಿ ಮತ್ತು ಗುಜರಾತ್ ಪೊಲೀಸರು ನಗರಕ್ಕೆ ಭೇಟಿ ನೀಡಿ ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಸಿರುವ ಬಗ್ಗೆ ಸ್ಥಳೀಯರು ತುಟಿ ಬಿಚ್ಚದ್ದಾರೆ. ಪೊಲೀಸರು ಮೌನವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ಸಿಒಡಿ ಪೊಲೀಸರು ಬಂಧಿಸಿರುವ ಶಂಕಿತ ಮೂಹ್ಮದ್ ಸುಲೇಮಾನನಿಗೆ ನಿಕಟವರ್ತಿಗಳು ಎನ್ನಲಾದ ಜಿಲಾನ್ ನಗರ ಹಾಗೂ ಮೆಹಬೂಬ್ ನಗರದ ಇಬ್ಬರು ಅ. 4 ರಿಂದ ಕಾಣಿಯಾಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಕಳೆದ 10 ದಿನದ ಹಿಂದೆ ದೆಹಲಿ ಮತ್ತು ಗುಜರಾತ್ ಪೊಲೀಸರು ಗುಲ್ಬರ್ಗಾಕ್ಕೆ ಆಗಮಿಸಿ ಸಿಮಿ ಸಂಘಟನೆಯೊಂದಿಗೆ ಸಂಬಂಧವಿರುವ ವ್ಯಕ್ತಿಗಳ ಮಾಹಿತಿಗಳನ್ನು ಕಲೆ ಹಾಕಿಕೊಂಡು ತೆರಳಿರುವುದಾಗಿ ತಿಳಿದು ಬಂದಿದೆ. ಈವರೆಗೂ 4 ಮಂದಿ ಸಿಮಿ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. 20 ಹೆಚ್ಚು ಸಿಮಿ ಕಾರ್ಯಕರ್ತರು ತೆಲೆಮರೆಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಭಜರಂಗದಳವನ್ನು ನಿಷೇಧಿಸಿ :ಶರದ್ ಪವಾರ್
ಸಿಮಿ ನಂಟು, 3 ಎಚ್ ಎ ಎಲ್ ನೌಕರರ ವಿಚಾರಣೆ
ಮೈಸೂರಿನಲ್ಲಿ 2 ಶಂಕಿತ ಉಗ್ರರ ಬಂಧನ
ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜಾಪುರ, ಆಲಮಟ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+