ಮೈಸೂರಿನಲ್ಲಿ ಇನ್ ಫೋಸಿಸ್ ಉದ್ಯೋಗಿ ಅತ್ಮಹತ್ಯೆ

ಮೈಸೂರು, ಅ. 6 : ನಗರದ ಪ್ರತಿಷ್ಠಿತ ಇನ್ ಫೋಸಿಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದ ಜಾರ್ಖಂಡ್ ಮೂಲದ ಸಾಫ್ಟವೇರ್ ಇಂಜಿನಿಯರ್ ಯುವತಿಯೊಬ್ಬರು ಕಂಪೆನಿಯ ಅವರಣದಲ್ಲಿರುವ ವಸತಿ ನಿಲಯದಲ್ಲಿ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೂಜಾ ಪಟೇಲ್ (23) ಮೃತಪಟ್ಟಿರುವ ದುರ್ದೈವಿ. ಕಳೆದ ಸೆಪ್ಟೆಂಬರ್ 8 ರಂದು ತರಬೇತಿ ಪಡೆಯಲು ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದರು. ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಪೂಜಾ ಪಟೇಲ್ ಹಾಗೂ ಶ್ರೀಜಾ ಪಟ್ನಾಯಕ್ ಒಂದೇ ರೂಮ್ ನಲ್ಲಿ ವಾಸಿಸುತ್ತಿದ್ದರು.

ಭಾನುವಾರ ಶ್ರೀಜಾ ರಜೆ ಕಳೆಯಲು ಹೊರಗಡೆ ಹೋದಾಗ ಈ ಘಟನೆ ಸಂಭವಿಸಿದೆ. ಶ್ರೀಜಾ ಪಟ್ನಾಯಕ್ ಭಾನುವಾರ ರಾತ್ರಿ 8.30 ಸುಮಾರಿಗೆ ರೂಮ್ ಗೆ ತೆರಳಿದಾಗ ಪೂಜಾ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳಿನಿಂದ ಸಾಫ್ಟವೇರ್ ಕಂಪನಿಯ ಉದ್ಯೋಗಿಗಳು ಅತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗತೊಡಗಿದೆ. ಬೆಂಗಳೂರಿನಲ್ಲಿ ನೋಕಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೋನಿ ಎಂಬುವವರು ಹಿರಿಯ ಉದ್ಯೋಗಿಗಳು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತೀಚೆಗೆ ಐಬಿಎಂನ ಉದ್ಯೋಗಿ ಮನೋಜ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

(ದಟ್ಸ್ ಕನ್ನಡ ವಾರ್ತೆ)

ಐಬಿಎಂ ಉದ್ಯೋಗಿ ಕೊಲೆ, ಗೆಳೆಯರ ಕೈವಾಡ ಶಂಕೆ
ಮಣಿದ ನೋಕಿಯಾ : ಸೋನಿ ಕುಟುಂಬಕ್ಕೆ ಪರಿಹಾರ
ಮೇಲಧಿಕಾರಿಗಳ ಕಿರುಕುಳ : ಯುವತಿ ನೇಣಿಗೆ ಶರಣು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+