ರೇವ್ ಪಾರ್ಟಿ ಮೇಲೆ ದಾಳಿ 241 ಮಂದಿ ಬಂಧನ

ಮುಂಬೈ, ಅ. 6 : ಮಹತ್ವದ ಕಾರ್ಯಚರಣೆಯಲ್ಲಿ ಬಾಲಿವುಡ್ ನಟರೊಬ್ಬರಿಗೆ ಸೇರಿದ ಪಬ್ ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಮುಂಬೈ ಅಪರಾಧಿ ವಿಭಾಗದ ಪೊಲೀಸರು ಮಾದಕ ವಸ್ತು ಸೇವನೆ ಆರೋಪದ ಮೇಲೆ 241 ಜನರನ್ನು ಬಂಧಿಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳನನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಜೂಹೂ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಬಾಲಿವುಡ್ ನ ಖಳ ನಟ ಶಕ್ತಿ ಕಪೂರ್ ಒಡೆತನಕ್ಕೆ ಸೇರಿದ '72 ಡಿಗ್ರಿಸ್'ಪಬ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾದಕ ವಸ್ತು ಸೇವಿಸಿದ್ದ 241 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಟ ಶಕ್ತಿ ಕಪೂರ್ ಹಾಗೂ ಅವರ ಪುತ್ರ ಸೇರಿ ಅನೇಕ ವಿದೇಶಿಯರು ಇದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಬ್ ನಲ್ಲಿ 100 ಹೆಚ್ಚು ಮಾದಕ ಮಾತ್ರೆಗಳು, ಹೆರಾಯಿನ್, ಕೋಕೇನ್, ಎಲ್ ಸಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಪರೀಕ್ಷೆಗೆ ಒಳಪಡಿಸಿ ಮಾದಕ ವಸ್ತು ಸೇವನೆ ಖಚಿತಪಡಿಸಿಕೊಂಡ ನಂತರ ಅವರ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಬಂಧಿತ ಎಲ್ಲ ಆರೋಪಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ. ಮಾದಕ ವಸ್ತು ಸೇವನೆ ಕ್ರಿಮಿನಲ್ ಅಪರಾಧಿವಾಗಿದ್ದು, ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)
ಕರವೇದಾಳಿಗೆ ದಾಳಿಗೆ ಸಿಕ್ಕ ವೀಕೆಂಡ್ ಗಾಂಜಾ ಪಾರ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+