ಸಿಮಿ ನಂಟು, 3 ಎಚ್ ಎ ಎಲ್ ನೌಕರರ ವಿಚಾರಣೆ
ಬೆಂಗಳೂರು, ಅ.2: ನಿಷೇಧಿತ ಉಗ್ರಗಾಮಿ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ)ಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿಂದ ಮೂವರು ಎಚ್ ಎ ಎಲ್ ನೌಕರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬುಧವಾರ ಬೆಂಗಳೂರಿಗೆ ಆಗಮಿಸಿದ ದೆಹಲಿ ಪೊಲೀಸರು ನಗರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ 3 ಎಚ್ ಎ ಎಲ್ ನೌಕರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿ ಸರಣಿ ಸ್ಫೋಟದ ನಂತರ ಈ ನೌಕರರ ವರ್ತನೆ ಸಂಶಯಾಸ್ಪದವಾಗಿತ್ತು. ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಇವರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ನೌಕರರು ಎಚ್ ಎ ಎಲ್ ನ ಪ್ರಮುಖ ಮಾಹಿತಿಯನ್ನು ರಹಸ್ಯವಾಗಿ ಇ-ಮೇಲ್ ಮುಖಾಂತರ ಸಿಮಿ ಮುಖಂಡರಿಗೆ ರವಾನಿಸುತ್ತಿದ್ದರು ಎನ್ನಲಾಗಿದೆ. ದೆಹಲಿ ಸ್ಫೋಟದಲ್ಲಿ ಇವರ ಪಾತ್ರ ಇದೆಯೇ ಎಂಬುದರ ಬಗ್ಗೆ ವಿಚಾರಿಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಗುಪ್ತದಳ ಪೊಲೀಸರು ಎಚ್ ಎ ಎಲ್ ನ ಈ ನೌಕರರ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿದ್ದರು. ''ಸ್ಫೋಟ ಸಂಬಂಧ ಎಚ್ ಎ ಎಲ್ ನ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸ್ ಆಯುಕ್ತ ಶಂಕರ ಬಿದರಿ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮೈಸೂರಿನಲ್ಲಿ 2 ಶಂಕಿತ ಉಗ್ರರ ಬಂಧನ
ಸಿಮಿ ನಿಷೇಧಕ್ಕೆ ಸಿದ್ಧ : ವೆಂಕಯ್ಯ ನಾಯ್ಡು
ಸರಣಿಸ್ಫೋಟದ ರುವಾರಿ ಸಿಮಿ ಉಗ್ರ ಸೆರೆ
ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜಾಪುರ, ಆಲಮಟ್ಟಿ












Click it and Unblock the Notifications