ಭಾರತದೊಡನೆ ಅಣು ಒಪ್ಪಂದಕ್ಕೆ ಫ್ರಾನ್ಸ್ ಸಹಿ
ಪ್ಯಾರಿಸ್, ಅ.1: ಭಾರತ ಹಾಗೂ ಫ್ರಾನ್ಸ್ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದವು. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಮತ್ತು ಫ್ರಾನ್ಸ್ ವಿದೇಶಾಂಗ ಸಚಿವ ಬರ್ನಾಡ್ ಕೋಚ್ನರ್ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೂ ಮುನ್ನ ಉಭಯ ದೇಶಗಳ ಪ್ರತಿನಿಧಿಗಳು ಪರಸ್ಪರ ಪರಮಾಣು ಸಹಕಾರ, ಸಾಮಾಜಿಕ, ಬಾಹ್ಯಾಕಾಶ, ಭದ್ರತಾ ವಿಷಯಗಳು ಹಾಗೂ ದ್ವಿಪಕ್ಷೀಯ ಬಾಂಧವ್ಯಗಳಿಗೆ ಸಂಬಂಧಿಸಿ ಮಾತುಕತೆ ನಡೆಸಿದರು.
ಸುಮಾರು 34 ವರ್ಷಗಳಪ್ರತ್ಯೇಕತೆ ನೀತಿಯಿಂದಾಗಿ ಅಂತಾರಾಷ್ಟ್ರೀಯ ಪರಮಾಣು ವ್ಯಾಪಾರದಿಂದ ಹೊರಗುಳಿದಿದ್ದ ಭಾರತವನ್ನು ಮುಖ್ಯವಾಹಿನಿಗೆ ತರುವ ಮೊದಲ ಹಂತವಾಗಿ ಎರಡೂ ದೇಶಗಳು ಪರಮಾಣು ರಿಯಾಕ್ಟರ್ ಗಳು ಮತ್ತು ಅಣುಇಂಧನ ಪೂರೈಕೆಗೆ ಸಂಬಂಧಿಸಿ ಈ ಸಹಕಾರ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಪರಮಾಣು ಸುರಕ್ಷತೆ, ಅಣುವಿಕಿರಣ ಹಾಗೂ ಪರಮಾಣು ಇಂಧನ ಆವರ್ತ ನಿರ್ವಹಣೆಗಳು ಸೇರಿವೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications