ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಶುರು : ಈಶ್ವರಪ್ಪ
ಬೆಂಗಳೂರು, ಸೆ. 30 : ರಾಜ್ಯದಲ್ಲಿ ವಿದ್ಯುತ್ ಆಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ 2 ಗಂಟೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 ಗಂಟೆಗಳ ಕಾಲ ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆಯ ಅಭಾವ ಕಂಡು ಬಂದಿದ್ದರಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದರು. ಹಲವು ಮೂಲಗಳಿಂದ ವಿದ್ಯುತ್ ಖರೀದಿಗೆ ಪ್ರಯತ್ನಿಸಲಾಗುತ್ತಿದ್ದು, ಕೊರತೆ ನಿಗಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸೆ.8ರಂದು ಛತ್ತೀಸ್ ಗಡದ ವಿದ್ಯುತ್ ಗೆ ಚಾಲನೆ
ರಾಜ್ಯದಲ್ಲಿ ನಿತ್ಯ ಅರ್ಧ ಗಂಟೆ ಲೋಡ್ ಶೆಡ್ಡಿಂಗ್












Click it and Unblock the Notifications